ಮೈಸೂರು,ಸೆಪ್ಟಂಬರ್,1,2023(www.justkannada.in): ಈ ಬಾರಿ ವಿಜೃಂಭಣೆ ,ಅದ್ಧೂರಿಯಾಗಿ ಮೈಸೂರು ದಸರಾ ಆಚರಣೆ ಮಾಡುತ್ತೇವೆ. ಇದಕ್ಕಾಗಿ 30 ಕೋಟಿ ರೂ. ಅನುದಾನ ಕೇಳಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಗಜಪಯಣಕ್ಕೆ ವಿದ್ಯುಕ್ತ ಚಾಲನೆ ಕೊಟ್ಟಿದ್ದೇವೆ. ಭಾರತದ ಸಂವಿಧಾನ ಎಲ್ಲಾ ಪ್ರಜೆಗಳಿಗೆ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದೆ. ನಾಡದೇವತೆ ಚಾಮುಂಡೇಶ್ವರಿಯಲ್ಲಿ ನಂಬಿಕೆ ಇರುವ ರಾಜ್ಯ ನಮ್ಮದು. 9 ಆನೆಗಳನ್ನು ಸಂಪ್ರಾದಯಕವಾಗಿ ಸ್ವಾಗತ ಮಾಡಿದ್ದೇವೆ. 2004 ರಲ್ಲಿ ಆನೆಗಳು ನಡೆದು ಬರುತ್ತಿದ್ದವು. ಆನೆಗಳ ಹಿತದೃಷ್ಟಿಯಿಂದ ಲಾರಿಯಲ್ಲಿ ಆನೆಗಳನ್ನು ಕರೆ ತರಲಾಗುತ್ತದೆ. ಈಗ 9 ಆನೆಗಳು ಇದರ ಜೊತೆಗೆ ಇನ್ನೂ 5 ಆನೆಗಳು ಬಂದು ಸೇರುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಟ್ಟದ ಸಭೆ ಮಾಡಿದ್ದವು. ಸಿಎಂ ಸಿದ್ದರಾಮಯ್ಯ ಅದ್ದೂರಿ ದಸರಾ ಮಾಡಲು ಹೇಳಿದ್ದಾರೆ ಮುಂದೆ ಕಾರ್ಯಕಾರಿ ಸಮಿತಿ ರಚನೆ ಮಾಡುತ್ತೇವೆ. ದೇಶದ ಚಾರಿತ್ರಿಕ ಹಿನ್ನಲೆ ವಿಜಯ ನಗರ ಸಾಮ್ರಾಜ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ, ಸಂವಿಧಾನ ಆಶಯ, ಸ್ವಾತಂತ್ರ್ಯದ ಉದ್ದೇಶ ಜೊತೆಗೂಡಿ ದಸರಾ ಆಚರಣೆ ಮಾಡುತ್ತೇವೆ. ದೇಶ ವಿದೇಶಗಳಿಂದ ದಸರೆಗೆ ಜನ ಬರ್ತಾರೆ. ಆದ್ದರಿಂದ ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡುತ್ತೇವೆ. ಎಲ್ಲಾ ಆನೆಗಳಿಗೂ ಸ್ವಾಗತ. 30 ಕೋಟಿ ರೂ. ಅನುದಾನ ಕೇಳಿದ್ದೇವೆ ಮುಖ್ಯಮಂತ್ರಿಗಳು ಅಷ್ಟು ಹಣವನ್ನು ಕೊಡ್ತಾರೆ ಎಂದು ಸಚಿವ ಮಹದೇವಪ್ಪ ಹೇಳಿದರು.
Key words: mysore-dasara-Gajapayana- Minister -HC Mahadevappa