ಬೆಂಗಳೂರು,ಸೆಪ್ಟಂಬರ್,2,2023(www.justkannada.in): ಗೃಹ ಸಚಿವ ಡಾ ಜಿ.ಪರಮೇಶ್ವರ್ ಇಂದು ಜಯನಗರದ ಅಪೊಲ್ಲೋ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು.
ಮಾಜಿ ಸಿಎಂ ಹೆಚ್.ಡಿಕೆ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಕುಮಾರಸ್ವಾಮಿಯವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ, ಅವರ ಅದೃಷ್ಟ ಚೆನ್ನಾಗಿತ್ತು ಅಂತಲೇ ಹೇಳಬೇಕು, ಯಾಕೆಂದರೆ 4 ದಿನಗಳ ಹಿಂದೆ ಅವರಿಗೆ ಮೈಲ್ಡ್ ಸ್ಟ್ರೋಕ್ ಅಗಿತ್ತು . ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸದೆ ಹೋಗಿದ್ದರೆ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅವರನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುವುದರಿಂದ ಅಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದೆ ಎಂದು ಪರಮೇಶ್ವರ ಹೇಳಿದರು.
ಅವರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ, ತನ್ನೊಂದಿಗೆ ಮಾತಾಡಿದರು, ನಾಳೆ ಸಾಯಂಕಾಲ ಅವರನ್ನು ಡಿಸ್ಚಾರ್ಜ್ ಮಾಡಬಹುದು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
Key words: Home Minister- Dr. G. Parameshwar -health – former CM -HD Kumaraswamy.