ಮೈಸೂರು, ಸೆಪ್ಟೆಂಬರ್ 03, 2023 (www.justkannada.in): ಸಿದ್ದರಾಮಯ್ಯ ವಿರುದ್ದ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಪ್ರತಾಪಸಿಂಹ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಪ್ರತಾಪ್ ಸಿಂಹ ಬರೆದು ಕೊಟ್ಟ ಸ್ಕ್ರಿಪ್ಟ್ ಇದು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ? ಕುಡಿಯುವ ನೀರಿನ ಯೋಜನೆ ಸೇರಿ ಎಲ್ಲಾ ಮಾಡಿರುವುದು ಸಿದ್ದರಾಮಯ್ಯ. ಈಗ ಜಿಟಿಡಿ ಟೇಬಲ್ ಕುಟ್ಟಿ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದರು.
ಜಿ.ಟಿ.ದೇವೇಗೌಡ ಜೊತೆಯೂ ಚರ್ಚೆಗೆ ಸಿದ್ದ. ಬೇಕಾದರೆ ಸಂಸದ ಪ್ರತಾಪಸಿಂಹರನ್ನು ಕರೆದುಕೊಂಡು ಬನ್ನಿ ಎಂದು ಲಕ್ಷ್ಮಣ್ ಸವಾಲು ಹಾಕಿದರು.
ಸಂಸದರಾಗಿ ಪ್ರತಾಪಸಿಂಹ ಕೊಡುಗೆ ಏನು ? ಸಿದ್ದರಾಮಯ್ಯ ಸಾಧನೆ ಪ್ರತಾಪಸಿಂಹ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಸೆ.6ಕ್ಕೆ ಸಂಸದರ ಕಚೇರಿ ಬಳಿ ಬಹಿರಂಗ ಚರ್ಚೆಗೆ ಸವಾಲು ಹಾಕಿದರು. ಸಿದ್ದರಾಮಯ್ಯ ಕೆಲಸಗಳ ದಾಖಲೆ ತರುತ್ತೇವೆ. ನಿಮ್ಮ ಸುಳ್ಳು ನಿಮ್ಮ ಡೋಂಗಿತನ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಕೈ ಮುಗಿದು ಕಿಡಿಗೇಡಿಗಳನ್ನು ಗೆಲ್ಲಿಸಬೇಡಿ ಅಂತಾ ಕೈ ಮುಗಿದಿದ್ದಾರೆ. ಇದರಲ್ಲಿ ಏನು ತಪ್ಪಿದೆ ? ಎಂದು ಹೇಳಿದರು.