ಬೆಂಗಳೂರು,ಸೆಪ್ಟಂಬರ್,5,2023(www.justkannada.in): ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ ನೀಡಿದೆ.
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕರಾವಳಿ ವಲಯದಲ್ಲಿ ಜಾಸ್ತಿ ಮಳೆಯಾಗಲಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಧ್ಯ ಕರ್ನಾಟಕದ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಮಂಗಳೂರು, ಉಡುಪಿ, ಉತ್ತರ ಕನ್ನಡದ ಕರಾವಳಿ ಭಾಗಗಳಲ್ಲಿ ವರುಣಾರ್ಭಟ ಜೋರಾಗಲಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ದಕ್ಷಿಣ ಭಾಗ, ಉತ್ತರ ಕನ್ನಡದ ಪೂರ್ವಭಾಗ, ಧಾರವಾಡ, ಹಾವೇರಿ, ಗದಗ, ವಿಜಯನಗರ ಜಿಲ್ಲೆಗೆ ಸಾಧಾರಣ ಮಳೆಯಾಗಬಹುದು. ಮೈಸೂರು, ಚಾಮರಾಜನಗರ, ಮಂಡ್ಯದ ದಕ್ಷಿಣ – ಪಶ್ಚಿಮ, ಚಿತ್ರದುರ್ಗ, ಬಳ್ಳಾರಿ, ಹುಬ್ಬಳ್ಳಿ ಧಾರವಾಡದ ಉತ್ತರ ಭಾಗ, ಬೆಳಗಾವಿ, ಬಾಗಲಕೋಟೆಗೆ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Key words: Rain – many districts – state- today-Meteorological- department -forecast.