ಬೆಂಗಳೂರು, ಸೆಪ್ಟೆಂಬರ್ 18, 2023 (www.justkannada.in): ಇಂದಿನಿಂದ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು, ಕಲಾಪದಲ್ಲಿ ಬಿಜೆಪಿ ಪ್ರಮುಖವಾಗಿ 5 ಬಿಲ್ಗಳನ್ನ ಮಂಡಿಸಲು ತಯಾರಿ ಮಾಡಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದಿಢೀರ್ ಅಂತ ವಿಶೇಷ ಅಧಿವೇಶನ ಏರ್ಪಡಿಸಿದ್ದು, ಇಂದಿನಿಂದ ಸೆಪ್ಟೆಂಬರ್ 22ರವರೆಗೆ ಸಂಸತ್ ಕಲಾಪ ನಡೆಯಲಿದೆ.
ಇಂದು ಹಳೇ ಸಂಸತ್ ಕಟ್ಟಡದಲ್ಲಿ ಅಧಿವೇಶನ ನಡೆಯಲಿದ್ದು, ಮಂಗಳವಾರದಿಂದ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ.
ಗೌರಿ ಗಣೇಶ ಹಬ್ಬದ ದಿನವೇ ವಿಶೇಷ ಕಲಾಪ ಕರೆದಿದ್ದು ಸರಿಯಲ್ಲ ಅಂತಿದ್ದರು. ಅಪಸ್ವರ ಎತ್ತಿದವರು ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ ಖರ್ಗೆ, ರಾಹುಲ್ಗಾಂಧಿ ಸೇರಿ ಕಾಂಗ್ರೆಸ್ನ ಪ್ರಮುಖ ನಾಯಕರು ಗೈರಾಗಿದ್ದರು.
ನೂತನ ಸಂಸತ್ ಭವನಕ್ಕೆ ಮಂಗಳವಾರದಿಂದ ಕಲಾಪ ಶಿಫ್ಟ್ ಆಗಲಿದೆ. ಹೀಗಾಗಿ ಸೆಂಟ್ರಲ್ ವಿಸ್ತಾ ಕಟ್ಟಡದ ಮೇಲೆ ಉಪರಾಷ್ಟ್ರಪತಿ ಹಾಗು ರಾಜ್ಯಸಭೆ ಪೀಠಾಧ್ಯಕ್ಷ ಜಗದೀಪ್ ಧನ್ಕರ್, ಲೋಕಸಭೆ ಸ್ಪೀಕರ್ ಓಂಬಿರ್ಲಾ ಪ್ರಪ್ರಥಮವಾಗಿ ತಿರಂಗಧ್ವಜ ಹಾರಿಸಿದ್ದರು.