ಮಹಿಳಾ ಮೀಸಲಾತಿ ಬಿಲ್ ಗೆ ಕಾಂಗ್ರೆಸ್ ಬೆಂಬಲ ಇದೆ- ಸೋನಿಯಾ ಗಾಂಧಿ.

ನವದೆಹಲಿ,ಸೆಪ್ಟಂಬರ್,20,2023(www.justkannada.in): ಮಹಿಳಾ ಮೀಸಲಾತಿ  ಮಸೂದೆಗೆ ಕಾಂಗ್ರೆಸ್ ಬೆಂಬಲ ಇದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಇಂದು ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆ ಪ್ರಾರಂಭವಾಗಿದ್ದು, ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ ಅವರು, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ, ನಾನು ನಾರಿ ಶಕ್ತಿ ವಂದನ್ ಅಧಿನಿಯಮ್ 2023 ರ ಬೆಂಬಲಕ್ಕೆ ನಿಂತಿದ್ದೇನೆ. ಇದರಿಂದ ಒಬಿಸಿ, ಎಸ್ ಸಿ, ಎಸ್ಟಿ ಮಹಿಳೆಯರಿಗೆ  ನ್ಯಾಯ ಸಿಗಲಿದೆ ಎಂದರು.

ರಾಜೀವ್ ಗಾಂಧಿ ಕಂಡಿದ್ದ ಕನಸು ಪೂರ್ಣಗೊಂಡಿದೆ. ಈ ಬಿಲ್ ಗಾಗಿ 13 ವರ್ಷಗಳಿಂದ ಮಹಿಳೆಯರು ಕಾಯುತ್ತಿದ್ದರು. ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಉಪ ಕೋಟಾದೊಂದಿಗೆ ಮಹಿಳಾ ಕೋಟಾ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದರು. ಹಾಗೆಯೇ  ಕೂಡಲೇ ಕೇಂದ್ರ ಸರ್ಕಾರ ಜನಗಣತಿ ಆರಂಭಿಸಬೇಕು ಎಂದು ಸೋನಿಯಾ ಗಾಂಧಿ ಆಗ್ರಹಿಸಿದರು.

Key words: Congress – support – Women’s- Reservation Bill-Congress -leader -Sonia Gandhi.