ಮುಂಬೈ, ಸೆಪ್ಟೆಂಬರ್ 03, 2019 (www.justkannada.in): ಬಡ ಗಾಯಕಿ ರಾಣು ಮಂಡಾಲ್ಗೆ ಆಫರ್ಗಳ ಸುರಿ ಮಳೆ ಸುರಿಯುತ್ತಿದೆ.
ಇತ್ತೀಚೆಗೆ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಅವರ ‘ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ..’ ಹಾಡಿಗೆ ಧ್ವನಿ ನೀಡಿದ ರಾಣು ಅವರಿಗೆ ಮತ್ತೊಂದು ಹಾಡಿನ ಆಫರ್ ಬಂದಿದೆ.
ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾಣು ಮಂಡಾಲ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಧ್ವನಿಯ ಮೂಲಕ ಗುರುತಿಸಿದ್ದೇ ತಡ, ಅವರ ಅದೃಷ್ಟವೇ ಬದಲಾಯಿತು.
ಹಿಮೇಶ್ ರೇಶ್ಮಿಯಾ ಮೊದಲ ಬಾರಿಗೆ ‘ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ… ಹಾಡು ಹಾಡುವ ಅವಕಾಶ ನೀಡಿದ್ದರು. ಇದೀಗ ಹಿಮೇಶ್ ರೇಶ್ಮಿಯಾ ಮತ್ತೊಂದು ಅವಕಾಶವನ್ನು ರಾಣು ಅವರಿಗೆ ನೀಡಿದ್ದಾರೆ. ರಾಣು ಧ್ವನಿಯಲ್ಲಿ ‘ಆಶಿಕಿ ಮೇ ತೆರಿ’ ಎಂಬ ಹೊಸ ಹಾಡನ್ನು ಹಾಡಿಸಿದ್ದಾರೆ.