ಮಂಡ್ಯ,ಸೆಪ್ಟಂಬರ್,23,2023(www.justkannada.in): ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಪ್ರತಿಭಟನೆ ನಡೆಸುತ್ತಿರುವುದು ಆಕ್ರೋಶ ವ್ಯಕ್ತಪಡಿಸುತ್ತಿರುವುದು ತಪ್ಪಲ್ಲ. ಆದರೆ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿರುವುದು ಸರಿಯಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಕೆಲವು ವಿಚಾರದಲ್ಲಿ ಲಿಮೇಟೇಷನ್ ನಲ್ಲಿ ಇರಬೇಕು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಸ್ವಲ್ಪ ರಿಲೀಫ್ ಸಿಗಲಿದೆ. ಈಗ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಆದರೆ ಈ ವಿಚಾರದಲ್ಲಿ ದೇವೇಗೌಡರಿಗೆ ನೋವಿದೆ. ಅದಕ್ಕೆ ಪಕ್ಷ ಸಂಘಟನೆಯನ್ನ ಕುಮಾರಸ್ವಾಮಿಗೆ ಬಿಟ್ಟಿದ್ದೇವೆ ಎಂದಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ದೊಡ್ಡವರು, ಏನೋನೋ ಹೇಳ್ತಾರೆ ನಾವು ಏನ್ ಮಾಡೋಕೆ ಆಗುತ್ತೆ. ಕಾವೇರಿ ರೈತರ ಪರ ನಿಲ್ಲುತ್ತೇವೆ ಅಂದರೆ ಸಂತೋಷ. ಆದರೆ ಜನರಿಗೆ ಪ್ರವೋಕ್ ಮಾಡೋದು, ಡೆಲ್ಲಿಗೆ ಹೋಗಿರೋದೆ ವ್ಯರ್ಥ ಅನ್ನೋದು ಸರಿಯಲ್ಲ ಎಂದು ಚಲುವರಾಯಸ್ವಾಮಿ ಟಾಂಗ್ ನೀಡಿದರು.
Key words: Cauvery – issue – Farmer- protest – not wrong- Minister -Chaluvarayaswamy.