ಬೆಂಗಳೂರು,ಸೆಪ್ಟಂಬರ್,25,2023(www.justkannada.in): ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ನಾಳೆ ಬೆಂಗಳೂರು ಸಂಪೂರ್ಣ ಬಂದ್ ಆಗಲಿದೆ. ನೂರಾರು ಸಂಘಸಂಸ್ಥೆಗಳು ಬಂದ್ ಗೆ ಬೆಂಬಲಿಸಿವೆ ಎಂದು ಕಬ್ಬುಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ಕುರಬೂರು ಶಾಂತಕುಮಾರ್, ನೂರಾರು ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲ ಕೊಟ್ಟಿದೆ. ಸಂಪೂರ್ಣ ಬಂದ್ ಮಂಗಳವಾರ ನಡೆಯಲಿದೆ. ಟೌನ್ ಹಾಲ್ ಮೂಲಕ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗ ರ್ಯಾಲಿ ನಡೆಯಲಿದೆ. 26ರ ಬಂದ್‌ಗೆ ಬೆಂಬಲ ಕೊಡಲು ವಾಟಳ್‌ಗೆ ಹೇಳಿದ್ದೇವೆ ಎಂದಿದ್ದಾರೆ.
ಇನ್ನು ನಾಳೆಯ ಬೆಂಗಳೂರು ಬಂದ್ ಗೆ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ಚಾಲಕರ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ. ಹೋಟೆಲ್, ಆಟೋ ಚಾಲಕರಿಂದಲೂ ಬೆಂಗಳೂರು ಬಂದ್ ಗೆ ಬೆಂಬಲ ನೀಡಿದ್ದು ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬೆಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ.
Key words: Bengaluru- complete- bandh –tomorrow-Kuruburu Shanthakumar.