ಮೈಸೂರು,ಸೆ,3,2019(www.justkannada.in): ಡಿ.ಕೆ ಶಿವಕುಮಾರ್ ಸಾಹೇಬ್ರು ಯಾವುದೇ ಅಕ್ರಮ, ಅನ್ಯಾಯ ಮಾಡಿಲ್ಲ. ಡಿಕೆಶಿಯವರ ತಾಯಿಯ ಕಣ್ಣಲ್ಲಿ ನೀರು ಹಾಕಿಸಿದ ಶಾಪ ಸುಮ್ಮನೆ ಬಿಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ವಾಗ್ದಾಳಿ ನಡೆಸಿದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ತಂದೆ ತಾಯಿಗೆ ಎಡೆ ಇಡಲು ಅವಕಾಶ ನೀಡದೆ ತನಿಖೆ ಮಾಡುತ್ತಿರುವುದು ಶೋಚನೀಯ. ನಮಗೆ ನಮ್ಮ ನಾಯಕರ ಮೇಲೆ ನಂಬಿಕೆ ಇದೆ. ಡಿ.ಕೆ ಶಿವಕುಮಾರ್ ಸಾಹೇಬ್ರು ಯಾವುದೇ ಅಕ್ರಮ, ಅನ್ಯಾಯ ಮಾಡಿಲ್ಲ. ಡಿಕೆಶಿಯವರ ತಾಯಿಯ ಕಣ್ಣಲ್ಲಿ ನೀರು ಹಾಕಿಸಿದ ಶಾಪ ಸುಮ್ಮನೆ ಬಿಡುವುದಿಲ್ಲ. ಕರ್ನಾಟಕದ ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ಕೇಂದ್ರದ ಈ ನಡೆಯನ್ನು ಮಹಿಳಾ ಕಾಂಗ್ರೆಸ್ ಉಗ್ರವಾಗಿ ಖಂಡಿಸುತ್ತೆ. ಮುಂದಿನ ದಿನಗಳಲ್ಲಿ ಪ್ರತೀ ತಾಲೂಕಿನಲ್ಲೂ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದ್ವೇಷದ ರಾಜಕಾರಣ ಅಂದ್ರೆ ಏನು ಎಂಬುದನ್ನು ಕೇಂದ್ರ ಬಿಜೆಪಿ ಸರ್ಕಾರ ತೋರಿಸುತ್ತಿದೆ…
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದ ಡಾ.ಪುಷ್ಪ ಅಮರನಾಥ್, ಬಿಜೆಪಿಯ ಮತ್ತೊಂದು ಮುಖ ಬಯಲಾಗಿದೆ. ದ್ವೇಷದ ರಾಜಕಾರಣ ಅಂದ್ರೆ ಏನು ಎಂಬುದನ್ನು ಕೇಂದ್ರ ಬಿಜೆಪಿ ಸರ್ಕಾರ ತೋರಿಸುತ್ತಿದೆ. ಬಿಜೆಪಿಯ ಜನಾರ್ದನ ರೆಡ್ಡಿ ಅವರ ಬಳಿ ಹಣ ಸಿಕ್ಕಾಗ ಇ.ಡಿ ಹಾಗೂ ಐಟಿ ಇಲಾಖೆಗಳು ಈ ರೀತಿ ತನಿಖೆ ಮಾಡಲಿಲ್ಲ ಏಕೆ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರ ಶಕ್ತಿಕುಂದಿಸಲು ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದ್ದು, ಐಟಿ ಮತ್ತು ಇಡಿ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ.ಕೇಂದ್ರ ಸರ್ಕಾರದ ಈ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮಾನ ಮರ್ಯಾದೆ ಕಳೆದವರಿಗೆ ಡಿಸಿಎಂ ಸ್ಥಾನ…
ಇನ್ನು ಲಕ್ಷ್ಮಣ್ ಸವದಿಗೆ ಡಿಸಿಎಂ ಸ್ಥಾನ ನೀಡಿರುವುದಕ್ಕೆ ಟೀಕೆ ವ್ಯಕ್ತಪಡಿಸಿದ ಡಾ.ಪುಷ್ಪ ಅಮರನಾಥ್, ರಾಜ್ಯದ ಮಾನ ಮರ್ಯಾದೆ ಕಳೆದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ. ವಿಧಾನಸೌಧದಲ್ಲಿ ನೀಲಿ ಚಿತ್ರ ವೀಕ್ಷಸಿದವರಿಗೆ ಡಿಸಿಎಂ ಹುದ್ದೆ ನೀಡಿದ ಇವರಿಗೆ ನೈತಿಕತೆ ಇದೆಯೇ..? ಲಕ್ಷ್ಮಣ್ ಸವದಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
Key words: DK Shivakumar – not – illegal-mysore- Pushpa Amarnath- agaist-central govrnament