ಬೆಂಗಳೂರು,ಸೆಪ್ಟಂಬರ್,30,2023(www.justkannada.in): ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿರುವ ಸಿಎಂ ಇಬ್ರಾಹಿಂ, ಬಿಜೆಪಿ ಜೊತೆ ಮೈತ್ರಿ ಬಗ್ಗೆ ಕುಮಾರಸ್ವಾಮಿ ಮಾತಾನಾಡಿ ಬಂದಿದ್ದಾರೆ. ಇದು ಸರಿಯೋ ಅಲ್ಲವೋ ಎಂಬ ಬಗ್ಗೆ ಹೆಚ್ಡಿಕೆ ಜತೆ ಚರ್ಚಿಸುವೆ. ಹೆಚ್ಡಿಕೆ ದೆಹಲಿಗೆ ಹೋಗುವಾಗ ನನಗೆ ಒಂದು ಮಾತು ಹೇಳಿಲ್ಲ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ತಿಳಿಸಿದರು.
ಬಿಜೆಪಿ ಜೊತೆ ಮೈತ್ರಿ ಖಂಡಿತವಾಗಿಯೂ ಪಕ್ಷದ ತೀರ್ಮಾನವಲ್ಲ, ವಿಷಯ ಯಾವುದೇ ಆಗಿರಲ, ಮೊದಲು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು, ನಿರ್ಣಯ ಪಾಸಾಗಬೇಕು, ಸದಸ್ಯರೆಲ್ಲರ ಸಹಿ ಬೀಳಬೇಕು ಮತ್ತು ಕೊನೆಯಲ್ಲಿ ರಾಜ್ಯಾಧ್ಯಕ್ಷನಾದ ತಾನು ಅನುಮೋದನೆ ನೀಡುವ ಹಾಗೆ ಸಹಿ ಹಾಕಿದ ಮೇಲೆ ತೆಗೆದುಕೊಂಡ ನಿರ್ಣಯ ಪಕ್ಷದ ತೀರ್ಮಾನ ಅನಿಸಿಕೊಳ್ಳುತ್ತದೆ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.
ಅಕ್ಟೋಬರ್ 16ರಂದು ಬೆಂಬಲಿಗರೊಂದಿಗೆ ಚರ್ಚೆ ನಡೆಸುತ್ತೇನೆ. ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
Key words: alliance- JDS-BJP- displeasure -CM Ibrahim