ಮೈಸೂರು,ಸೆ,3,2019(www.justkannada.in): ಚಾಮುಂಡಿಬೆಟ್ಟದಲ್ಲಿ ಮತ್ತೊಂದು’ ದಾಸೋಹ ಭವನವನ್ನು ಕಟ್ಟಬೇಕೆಂಬ ಆಶಯವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣನವರು, ಶಾಸಕ ಜಿ.ಟಿ.ದೇವೇಗೌಡರು ಹೊಂದಿರುವುದು ಆತಂಕದ ವಿಚಾರವಾಗಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ಹಾಗೂ ಮೈಸೂರು ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕ ಲೋಕೇಶ್ ಮೊಸಳೆ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಹೇಳಿರುವುದಿಷ್ಟು…..
ಐತಿಹಾಸಿಕ ಸುಂದರ ನಗರವೆಂದು ಖ್ಯಾತಿ ಹೊಂದಿರುವ ಮೈಸೂರಿಗೆ ಕಿರೀಟ ಪ್ರಾಯದಂತೆ ಕಂಗೊಳಿಸುತ್ತಿರುವ ಚಾಮುಂಡಿ ಬೆಟ್ಟವನ್ನು ಒಂದುಕಡೆ ಸ್ವಚ್ಛ ಪರಿಸರ ವಲಯವನ್ನಾಗಿರೂಪಿಸಬೇಕೆಂದು ಹೊರಟ್ಟಿದ್ದರೆ ಇನ್ನೊಂದೆಡೆ ಹಸಿರು ಪರಿಸರವನ್ನು ನಾಶಮಾಡಿಕಾಂಕ್ರಿಟ್ ಭವನಗಳನ್ನು ನಿರ್ಮಿಸಲು ಹೊರಟಿರುವುದು ದುಗುಡದ ಸಂಗತಿಯಾಗಿದೆ.
ಪರಿಸರ ಪ್ರಜ್ಞೆ, ನಿಸರ್ಗ ಸೂಕ್ಷ್ಮತೆ, ಸೌಂದರ್ಯ ದೃಷ್ಠಿಕೋನ ನಮ್ಮನ್ನಾಳುವ ನಾಯಕರುಗಳಿಗೆ ಮುಖ್ಯವಾಗಿರಬೇಕು. ಕೇವಲ ಜನ ಸಮುದಾಯದ ಬೇಡಿಕೆಗಳು ಮಾತ್ರ ಆಡಳಿತ ಮಾಡುವ ನಾಯಕರುಗಳಿಗೆ ಮುಖ್ಯವಾಗುವುದಾದರೆ ಇಡೀ ಚಾಮುಂಡಿ ಬೆಟ್ಟವೇ ಬೃಹತ್ ಕಟ್ಟಡಗಳ ಮಯವಾಗುವುದರಲ್ಲಿ ಆಶ್ಚರ್ಯವಿಲ್ಲ. ಪರಿಸರ ಸಮತೋಲನವನ್ನುಕಾಪಾಡದ ಈ ದಿನಗಳಲ್ಲಿ ನೈಸರ್ಗಿಕ ಅನಾಹುತಗಳನ್ನು ಕಾಣುತ್ತಿದ್ದೇವೆ. ಇದರಿಂದಲೂ ಪಾಠ ಕಲಿಯದ ನಾವುಗಳು ಕೇವಲ ಜನಸಮುದಾಯದ ಭಕ್ತ-ಭಾವ ಮೋಜಿನಡೊಂಗಿ ನಾಗರೀಕತೆಯ ಬೇಡಿಕೆಗಳ ಆಶೋತ್ತರಗಳಿಗೆ ಬಲಿಯಾಗುತ್ತಿದ್ದೇವೆ.
ಬಂಡೀಪುರ ಹಾಗೂ ನಾಗರಹೊಳೆಅರಣ್ಯದಂಚಿನ ರೆವಿನ್ಯೂ (ಕಂದಾಯ) ಭೂವಲಯದ ಗ್ರಾಮಗಳನ್ನು ಸಾಮಾಜಿಕಅರಣ್ಯ ಗ್ರಾಮಗಳನ್ನಾಗಿ ಪರಿವರ್ತಸಿರುವ ರೀತಿಯಲ್ಲೇ ನಮ್ಮ ಚಾಮುಂಡಿ ಬೆಟ್ಟವನ್ನೂ ಕೂಡ ಸಾಮಾಜಿಕ ಅರಣ್ಯಗ್ರಾಮವನ್ನಾಗಿ ಪರಿವರ್ತಿಸಿ ಹೊಸ ಕಟ್ಟಡಗಳು ತಲೆ ಎತ್ತದಂತೆ ಅರಣ್ಯಇಲಾಖೆಯ ಆಡಳಿತಕ್ಕೆ ವಹಿಸಿ, ಕಂದಾಯ ಭೂ ಪ್ರದೇಶವನ್ನುರದ್ದು ಮಾಡಿದರೆ ಮಾತ್ರ ಸೂಕ್ಷ್ಮ ಪರಿಸರವನ್ನು ಉಳಿಸಿಕೊಳ್ಳಬಹುದಾಗಿದೆ. ನೂತನ ಕಟ್ಟಡಗಳನ್ನು ನಿರ್ಮಿಸಬೇಕಿದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಹಾಗೂ ಅರಣ್ಯ ಇಲಾಖೆಯ ನಿರಪೇಕ್ಷಣಾ ಪತ್ರಅಗತ್ಯವಾಗಿರುವಂತೆ ಕಾನೂನುರೂಪಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಪರಿಸರ ಪ್ರಜ್ಞೆ ಹೊಂದಿರುವ ಜಿಲ್ಲಾಧಿಕಾರಿಅ ಭಿರಾಮ್ ಜಿ. ಶಂಕರ್ ನಾಯಕರುಗಳಾದ ವಿ.ಸೋಮಣ್ಣ, ಜಿ.ಟಿ.ದೇವೇಗೌಡ ಮುಂತಾದವರು ಚಾಮುಂಡಿ ಬೆಟ್ಟವನ್ನು ಪರಿಸರಸೂಕ್ಷ್ಮವಲಯ ಎಂದು ಗುರುತಿಸಿ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ಅಲ್ಲದೆ ಚಾಮುಂಡಿ ಬೆಟ್ಟದಕಂದಾಯ (ರೆವಿನ್ಯೂ) ಭೂ ವಲಯವನ್ನುಅರಣ್ಯ ಇಲಾಖೆಗೆ ವಗರ್ಾಹಿಸಿ ಪರಿಸರ ಪ್ರಜ್ಞೆಯನ್ನು ಮೆರೆಯಬೇಕಾಗಿದೆ. ಹೀಗಾದರೆ ಮಾತ್ರ ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಸುಂದರ ಪರಿಸರ ಮುಂದಿನ ಜನಾಂಗಕ್ಕೂ ಬಿಟ್ಟು ಹೋಗಬಹುದಾಗಿದೆ.ಚಾಮುಂಡಿ ಬೆಟ್ಟ ಈಗಾಗಲೇ ಖಾಸಗಿ ಹಾಗೂ ಸಕರ್ಾರಿ ಬಡಾವಣೆಗಳಿಂದ ಸುತ್ತುವರಿದಿದ್ದು ನಿಧರ್ಿಷ್ಟ ಪ್ರಮಾಣದಲ್ಲಿ ಹಸಿರು ವಲಯದಗಡಿಯನ್ನುಗುರುತಿಸದೆ ಪ್ರಮಾಧವೆಸಗಿದ್ದೇವೆ. ಇನ್ಮುಂದೆಯಾದರೂ ಅಳಿದುಳಿದ ಸರ್ಕಾರಿ ಭೂಮಿಯನ್ನು ಬಡಾವಣೆಗಳಿಗೆ ಭೂ ಪರಿವರ್ತನೆಯಾಗದಂತೆಅರಣ್ಯ ಇಲಾಖೆಗೆ ವಗರ್ಾಹಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಹಸಿರು ವಲಯವನ್ನು ಗುರುತಿಸಿ ಮುಂದಿನ ತಲೆಮಾರಿಗೆ ಸುಂದರ ಮೈಸೂರನ್ನು ಉಳಿಸಿ ಬೆಳೆಸುವ ಜವಾಬ್ದಾರಿಇದೆ.
Key words: Dasoha Bhavan – Chamundibetta -green zone-Wildlife photographer -Lokesh mosale