ಬೆಂಗಳೂರು,ಅಕ್ಟೋಬರ್,11,2023(www.justkannada.in): ಆರ್ ಆರ್ ನಗರ ಕ್ಷೇತ್ರಕ್ಕೆ ಕಡಿತ ಮಾಡಿರುವ ಅನುದಾನವನ್ನ ಬಿಡುಗಡೆ ಮಾಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಬಿಜೆಪಿ ಶಾಸಕ ಮುನಿರತ್ನ ಮನವಿ ಮಾಡಿದರು.
ಆರ್ ಆರ್ ನಗರ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿದ ಸರ್ಕಾರದ ನಡೆ ಖಂಡಿಸಿ ಶಾಸಕ ಮುನಿರತ್ನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದರು. ಬಳಿಕ ಅರಮನೆ ಮೈದಾನದಲ್ಲಿ ಕಂಬಳ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಲು ಬಂದು ಸುಮಾರು 20 ನಿಮಿಷಗಳ ಕಾಲ ಶಾಸಕ ಮುನಿರತ್ನ ಕಾದರು.
ಕಾರ್ಯಕ್ರಮ ಮುಗಿಸಿ ಬಂದ ಡಿಸಿಎಂ ಡಿ.ಕೆ ಶಿವಕುಮಾರ್ ರನ್ನ ಭೇಟಿ ಮಾಡಿದ ಶಾಸಕ ಮುನಿರತ್ನ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕಾಲಿಗೆ ಬಿದ್ದು ನಮಸ್ಕರಿಸಿ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮುನಿರತ್ನರ ಬೆನ್ನುತಟ್ಟಿದರು.
ಬಳಿಕ ಮಾತನಾಡಿದ ಡಿಕೆ ಶಿವಕುಮಾರ್ , ಪ್ರಜಾಪ್ರಭುತ್ವದಲ್ಲಿ ಧರಣಿ ಹೋರಾಟ ನಡೆಯಬೇಕು. ಶಾಸಕ ಮುನಿರತ್ನ ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ. ಅವರು ಮನವಿ ಸಲ್ಲಿಸಿದ್ದರಲ್ಲಿ ತಪ್ಪೇನು ಇಲ್ಲ ಎಂದರು.
Key words: MLA -Muniratna – DCM -DK Shivakumar – release – grant.