ಮೈಸೂರು,ಸೆ,4,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನ ಬಿಜೆಪಿಯ ಸೇಡಿನ ದ್ವೇಷದ ರಾಜಕಾರಣದಿಂದ ಕೂಡಿದೆ. ಕಾಂಗ್ರೆಸ್ ಪಕ್ಷ ಕಾನೂನಾತ್ಮಕ ವಾಗಿ ಡಿಕೆಶಿ ಪರ ನಿಲ್ಲುತ್ತೇವೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿಕೆಶಿ ಇಡಿ ಬಂಧನ ವಿಚಾರ ಕುರಿತು ಬಿಜೆಪಿ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ರಾಜಕೀಯ ಸೇಡಿನಿಂದ ಡಿ.ಕೆ ಶಿವಕುಮಾರ್ ಬಂಧನ ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಹೀಗೆ ಮಾಡ್ತಿದೆ. ಬಿಜೆಪಿಯವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ನಾಯಕರನ್ನು ಒಬ್ಬೊಬ್ಬರನ್ನಾಗಿ ಮುಗಿಸಲು ಹೀಗೆ ಮಾಡ್ತಿದ್ದಾರೆ. ವಿರೋಧ ಪಕ್ಷದವರನ್ನ ಮುಗಿಸುವ ಉದ್ದೇಶ ಇದೆ ಬಿಜೆಪಿಗೆ ಅದು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ನಾವು ಪ್ರತಿಭಟನೆ ಮಾಡ್ತಿವಿ. ಡಿಕೆಶಿ ಯಾವುದೇ ಸಮನ್ಸ್ ಉಲ್ಲಂಘನೆ ಮಾಡಿಲ್ಲ. ಅವರನ್ನು ಬಂಧನ ಮಾಡುವ ಅವಶ್ಯಕತೆ ಇರ್ಲಿಲ್ಲ. ಕೇಂದ್ರ ಸರ್ಕಾರ ಈ ಕೆಲಸ ಮಾಡುತ್ತಿದೆ. ಬಿಎಸ್ ಯಡಿಯೂರಪ್ಪನಿಗೆ ಗೊತ್ತಿಲ್ಲದೆ ಮಾಡ್ತಾರಾ..? ಅವರು ಇದಕ್ಕೂ ನಮಗೂ ಸಂಬಂಧ ಇಲ್ಲ ಅಂತಾರೆ. ಇದು ಕೇವಲ ರಾಜಕೀಯವಾಗಿ ಅವರು ಹೀಗೆ ಮಾತಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದರು.
ನಾಲ್ಕು ದಿನ ವಿಚಾರಣೆ ನಡೆಸಿದ್ದಾಗ ಉತ್ತರ ಕೊಡದವರು. ಈಗ ಬಂಧನ ಮಾಡ್ಬಿಟ್ರೆ ಉತ್ತರ ಕೊಡ್ಬಿಡ್ತಾರಾ ಹೇಳಿ. ಚಿದಂಬರಂ ಹಾಗೂ ಡಿಕೆಶಿ ಕೇಸ್ ಗಳು ಬೇರೆ ಬೇರೆ ಆದ್ರೆ ಅವರಿಬ್ವರ ಬಂಧನ ರಾಜಕೀಯ ಪ್ರೇರಿತ ಎಂದು ಸಿದ್ಧರಾಮಯ್ಯ ನುಡಿದರು.
Key words: Revenge- -politics – BJP-Former CM Siddaramaiah-statement- dk shivakumar- arrest