ಅಹಮದಾಬಾದ್.ಅಕ್ಟೋಬರ್,14,2023(www.justkannada.in): ಏಕದಿನ ವಿಶ್ವಕಪ್ 2023 ಇಂದು ಗುಜರಾತ್ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ- ಪಾಕಿಸ್ತಾನ ನಡುವೆ ಹಣಾಹಣಿ ನಡೆಯುತ್ತಿದ್ದು ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ಪಾಕ್ ತತ್ತರಿಸಿದ್ದು 191 ರನ್ ಗಳಿಗೆ ಆಲ್ ಔಟ್ ಆಗಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡರು. ಪಾಕಿಸ್ತಾನ ಪರ ಬ್ಯಾಟಿಂಗ್ ಆರಂಭಿಸಿದ ಅಬ್ದುಲ್ ಶಫಿ, ಇಮಾನ್ ಉಲ್ ಹಕ್ ಉತ್ತಮ ಆರಂಭ ಒದಗಿಸಿದರು. ಅಬ್ದಲ್ ಶಫಿ 20 ರನ್ ಮತ್ತು ಇಮಾಮ್ ಉಲ್ ಹಕ್ 36 ರನ್ ಗಳಿಗೆ ಔಟ್ ಆದರು. ನಂತರ ಸ್ಕ್ರೀಜ್ ಕಚ್ಚಿ ನಿಲ್ಲುವ ಸೂಚನೆ ನೀಡಿದ್ದ ಬಾಬರ್ ಅಜಾಮ್ 50 ರನ್ ಬಾರಿಸಿ ಮೊಹಮ್ಮದ್ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸೌದ್ ಶಕೀಲ್ ಮತ್ತು ಇಫ್ತಕರ್ ಅಹ್ಮದ್ ಹೆಚ್ಚು ಹೊತ್ತು ನಿಲ್ಲಲಿಲ್ಲ ಕುಲ್ದೀಪ್ ಯಾದವ್ ಗೆ ಒಂದೇ ಓವರ್ ನಲ್ಲಿ ಇಬ್ಬರು ವಿಕೆಟ್ ಒಪ್ಪಿಸಿದರು.
ಉತ್ತಮವಾಗಿ ಆಟವಾಡುತ್ತಿದ್ದ ಮೊಹಮ್ಮದ್ ರಿಜ್ವಾನ್ ಕೂಡ ಬೂಮ್ರಾ ದಾಳಿಗೆ ಪೆವಿಲಿಯನ್ ಸೇರಿದರು. ಒಂದು ಹಂತದಲ್ಲಿ150ರನ್ 2 ವಿಕೆಟ್ ಕಳೆದು ಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಪಾಕ್ ತಂಡ ಬಳಿಕ ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿ 191 ರನ್ ಗಳಿಗೆ ಆಲ್ ಔಟ್ ಆಯಿತು.
ಭಾರತದ ಪರ ಉತ್ತಮ ಬೌಲಿಂಗ್ ಮಾಡಿದ ಜಸ್ಪ್ರಿತ್ ಬೂಮ್ರಾ , ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ರವೀಂದ್ರ ಜಡೆಜಾ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಭಾರತ ಗೆಲ್ಲಲು 192 ರನ್ ಬಾರಿಸಬೇಕಿದೆ.
Key words: ODI World cup- Pakistan – All out -191 runs- Indian -bowlers: