ಮೈಸೂರು, ಅಕ್ಟೋಬರ್ 15, 2023(www.justkannada.in): ನಾಡದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ಒಂದು ಶಾಶ್ವತ ದೀಪಾಲಂಕಾರ ಮಾಡುವಂತೆ ಸಂಗೀತ ನಿರ್ದೇಶಕ ಹಂಸಲೇಖ ಸಲಹೆ ನೀಡಿದರು.
ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟಿಸಿದ ಮಾತನಾಡಿದ ವೇಳೆ ಮಾತನಾಡಿದ ಅವರು, ಮೈಸೂರಿಗೆ ಕಳಶಪ್ರಾಯವಾದ ಚಾಮುಂಡಿಬೆಟ್ಟದಲ್ಲಿ ಒಂದು ಶಾಶ್ವತ ದೀಪಾಲಂಕಾರ ಮಾಡಿದರೆ ಅದು ವರ್ಷವಿಡೀ ಎಲ್ಲರನ್ನು ಸೆಳೆಯುತ್ತದೆ ಎಂದು ಹೇಳಿದರು.
ಬೆಟ್ಟದಲ್ಲಿ ಈ ದೀಪ ಶಾಶ್ವತವಾಗಿ ಬೆಳಗಿದರೆ ಎಲ್ಲರನ್ನೂ ವರ್ಷವಿಡೀ ಸೆಳೆಯುತ್ತದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣವೂ ಇರುವುದರಿಂದ ಈ ದೀಪ ಎಲ್ಲರ ಕಣ್ಮನ ಸೆಳೆಯಲಿದೆ ಎಂದು ಸಲಗೆ ನೀಡಿದರು.
ಹಂಸಲೇಖ ಹೇಳಿದ ಅಭಿಮನ್ಯು ವಿವೇಕದ ಕಥೆ…
ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಅಭಿಮನ್ಯುವಿನ ವಿವೇಕದ ಕಥೆಯೊಂದನ್ನು ಹಂಸಲೇಖ ಹೇಳಿದರು.
ಕಾಡಿನಲ್ಲಿ ಕೆಲಸ ಮಾಡುವ ವೇಳೆ ಲಾರಿಗೆ ಮರದ ದಿಮ್ಮಿಗಳನ್ನು ತುಂಬುವ ಕೆಲಸ ಮಾಡುತ್ತಿದ್ದ ಅಭಿಮನ್ಯು ಕೊನೆಗೆ ಎರಡು ದಿಮ್ಮಿಗಳನ್ನು ಲಾರಿಗೆ ಏರಿಸದೇ ಹಾಗೆ ಉಳಿಸುತ್ತದೆ. ಮಾವುತ ಎಷ್ಟು ಹೇಳಿದರೂ ಕೇಳುವುದಿಲ್ಲ. ಕೊನೆಗೆ ಅಧಿಕಾರಿಗಳ ಆದೇಶದ ಮೇರೆಗೆ ಒಂದು ದಿಮ್ಮಿಯನ್ನು ಏರಿಸಿದಾಗ ಲಾರಿಯಲ್ಲಿ ತುಂಬಿದ್ದ ಎಲ್ಲ ದಿಮ್ಮಿಗಳು ಕೆಳಗುರುಳುತ್ತವೆ. ಲಾರಿಯ ಸಾಮರ್ಥ್ಯ ಮೀರಿದ್ದರಿಂದ ಎಲ್ಲ ದಿಮ್ಮಿಗಳು ಕೆಳಗೆ ಉರುಳುತ್ತವೆ. ಆ ಲಾರಿಯ ಸಾಮರ್ಥ್ಯದ ಅರಿವು ಅಭಿಮನ್ಯು ಆನೆಗೆ ಇರುತ್ತದೆ. ಆ ಆನೆಗೆ ಗೊತ್ತಿರುವ ವಿವೇಕ ನಮ್ಮ ಹಿರಿಯರಿಗೆ ಬೇಡವೇ.? ಬದುಕನ್ನು ಎಲ್ಲರೂ ಆನಂದಿಸಬೇಕು. ಅದನ್ನು ಕಸಿದುಕೊಳ್ಳುವ ಕೆಲಸ ಮಾಡಬಾರದು ಎಂದರು. ರಾಷ್ಟ್ರದ ಜತೆ, ವಿಶ್ವದೊಂದಿಗೆ ಕನ್ನಡವನ್ನು ಸಮೀಕರಿಸುವ ಕೆಲಸ ಮಾಡಬೇಕಿದೆ ಎಂದರು.