ಬೆಂಗಳೂರು,ನವೆಂಬರ್,11,2023(www.justkannada.in): ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ಮಾಡಿರುವುದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಬಳಸಿಕೊಳ್ಳಲು ನಾಟಕೀಯ ತಂತ್ರವಷ್ಟೆ ಎಂದು ಸಚಿವ ಎಂ.ಬಿ ಪಾಟೀಲ್ ಟೀಕಿಸಿದರು.
ಇಂದು ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಚುನಾವಣೆ ಮುಂಚೆಯೇ ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡಬೇಕಿತ್ತು. ಲಿಂಗಾಯತರು ಯಾರೂ ದಡ್ಡರಲ್ಲ. ಬಿಜೆಪಿ ತಂತ್ರ ಗೊತ್ತಾಗಿದೆ. ವಿಜಯೇಂಧ್ರ ರಾಜ್ಯಾಧ್ಯಕ್ಷರಾಗಿ ನೇಮಕ ಬಿಜೆಪಿಯ ನಾಟಕೀಯವಷ್ಟೆ. ಯಡಿಯೂರಪ್ಪರನ್ನ ಬಳಸಿಕೊಳ್ಳಲು ನಾಟಕೀಯ ತಂತ್ರ, ರೂಪಿಸಿದೆ ಎಂದರು.
Key words: Vijayendra -BJP -State –President-Dramatic ploy –bjp– Minister -MB Patil