ಬೆಂಗಳೂರು,ಸೆ,6,2019(www.justkannada.in): ವಿಧಾನಸೌಧದಲ್ಲಿ ಬ್ಲೂ ಫಿಲಂ ನೋಡಿದ್ದು ದೇಶದ್ರೋಹದ ಕೆಲಸ ಅಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವ ಮಾಧುಸ್ವಾಮಿ, ನೀಲಿಚಿತ್ರ ವೀಕ್ಷಣೆ ರಾಷ್ಟ್ರ ವಿರೋಧಿ ಚಟುವಟಿಕೆ ಅಲ್ಲ. ದೇಶದ್ರೋಹವೂ ಅಲ್ಲ. ಲಕ್ಷ್ಮಣ್ ಸವದಿ ವಿಧಾನಸಭೆಯಲ್ಲಿ ನೀಲಿಚಿತ್ರ ವೀಕ್ಷಿಸಿದ್ದು ತಪ್ಪು. ಆದರೆ ಲಕ್ಷ್ಮಣ್ ಸವದಿಯನ್ನ ಡಿಸಿಎಂ ಮಾಡಬಾರದು ಅನ್ನುವುದೇಕೆ. ಇದು ಚರ್ಚಿಸುವ ವಿಚಾರವೇ ಅಲ್ಲ ಎಂದಿದ್ದಾರೆ.
ಇದೀಗ ಮತ್ತೆ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿರುವ ಸಚಿವ ಮಾಧುಸ್ವಾಮಿ, ಮಾಧ್ಯಮಗಳು ನನ್ನ ಹೇಳಿಕೆಯನ್ನ ತಿರುಚಿವೆ. ನಾನು ಹೇಳಿದ್ದು ಹೌದು. ಲಕ್ಷ್ಮಣ್ ಸವದಿ ಆಕಸ್ಮಿಕವಾಗಿ ನೀಲಿಚಿತ್ರ ವೀಕ್ಷಿಸಿದ್ದಾರೆ. ಅದು ತಪ್ಪು. ಅದರೆ ಅದು ದೇಶದ್ರೋಹವಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ನೀಡಿದ್ದು, ಹೀಗಾಗಿ ವಿಧಾನಸೌಧದಲ್ಲಿ ಬ್ಲೂ ಫಿಲಂ ನೋಡಿದ್ದ ವ್ಯಕ್ತಿಗಳಿಗೆ ಬಿಜೆಪಿ ಮಣೆ ಹಾಕಿದೆ ಎಂದು ವಿಪಕ್ಷಗಳು ಟೀಕಿಸಿವೆ.
Key words: Seeing -Bluefilm -not – Treason-Minister Madhuswamy -defended – DCM -Laxman Sawadi