ಬೆಂಗಳೂರು, ನವೆಂಬರ್,11,2023(www.justkannada.in): ಏಕದಿನ ವಿಶ್ವಕಪ್ ಲೀಗ್ ಕೊನೆಯ ಪಂದ್ಯ ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ ಲ್ಯಾಂಡ್ ನಡುವೆ ನಡೆಯಲಿದ್ದು, ಸ್ಟೇಡಿಯಂ ಸುತ್ತಾ ಮುತ್ತಾ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್ಟಿ, ಬೆಂಗಳೂರಲ್ಲಿ ಒಟ್ಟು ಐದು ಪಂದ್ಯ ನಿಗಧಿಯಾಗಿತ್ತು. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದೆ, ಐದನೇ ಪಂದ್ಯ ನಾಳೆ ನಡೆಯಲಿದೆ. ನಾಳೆ ಭಾರತ-ನೆದರ್ಲ್ಯಾಂಡ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಾ ಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಒಂಬತ್ತು ಮಂದಿ ಎಸಿಪಿ, 28 ಇನ್ಸ್ಪೆಕ್ಟರ್, 86 ಮಂದಿ ಪಿಎಸ್ಐಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ, 4 ಕೆಎಸ್ ಆರ್ಪಿ ತುಕಡಿ, 2 ಡಿ ಸ್ವಾಟ್ ಆಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ವಿಧ್ವಂಸಕ ಕೃತ್ಯ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂನ ಎಲ್ಲಾ ಗೇಟ್ ಬಳಿ ವಿದ್ವಾಂಸಕ ಕೃತ್ಯ ತಪಾಸಣೆ ಕೈಗೊಳ್ಳುತ್ತೇವೆ. ಟಿಕೆಟ್ ಹಿಂದೆ ನಮೂದಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಡಿಸಿಪಿ ಶೇಖರ್ ಹೆಚ್ಟಿ ತಿಳಿಸಿದರು.
ಈಗಾಗಲೇ ವಿಶ್ವಕಪ್ ಮೊದಲ ಸೆಮಿಫೈನಲ್ ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಡ್ 2ನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಆಡುವುದು ಬಹುತೇಕ ಖಚಿತವಾಗಿದೆ.
Key words: ODI World Cup- India-Netherlands- match – Bengaluru –tomorrow-tight security