ಮೈಸೂರಲ್ಲಿ ಟ್ರಾಫಿಕ್ ಪೇದೆಯಾದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್..!

 

ಮೈಸೂರು, ಸೆ.08, 2019 : ( www.justkannada.in news ) ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರಿಗೆ ಹೆಚ್ಚಿನ ದಂಡ ವಿದಿಸುವ ಆದೇಶದ ವಿರುದ್ಧ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರಿಂದ ವಿನೂತನ ಪ್ರತಿಭಟನೆ.

ಟ್ರಾಫಿಕ್ ಪೋಲೀಸ್ ಸಮವಸ್ತ್ರ ಧರಿಸಿ ಭಾನುವಾರ ಮೈಸೂರಿನ ರೈಲ್ವೆ ನಿಲ್ದಾಣದ ವೃತ್ತದ ಬಳಿ ವಾಹನ ಸವಾರರನ್ನು ತಪಾಸಣೆ ನಡೆಸುವ ಮೂಲಕ ವಾಟಾಳ್ ನಾಗರಾಜ್ ವಿನೂತನವಾಗಿ ದಂಡ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಿದರು. ಆ ಮೂಲಕ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ವಾಹನ ಸವಾರರನ್ನು ತಡೆದು ನಿಲ್ಲಿಸಿ, ವಾಹನದ ದಾಖಲೆ ಪರಿಶೀಲಿಸಿದಂತೆ ನಟಿಸಿದರು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಂದ್ರ ಸರ್ಕಾರ ಯಾವುದೆ ಹೊಸ ನಿಯಮ ಜಾರಿಗೊಳಿಸುವ ಮುನ್ನ ಚರ್ಚೆ ಮಾಡದೆ ಏಕಾಏಕಿ ಕಾಯ್ದೆಯನ್ನ ಜಾರಿಮಾಡಿದೆ. ಪರಿಣಾಮ ಮೋಟಾರುವಾಹನ ತೆರಿಗೆ ಜನರಿಗೆ ಯಮ ಪಾಶವಾಗಿದೆ. ಹೆಚ್ಚಿನ ದಂಡ ವಸೂಲಿ ಮಾಡುವುದು ಒಂದು ದಂಧೆಯಾಗಿದೆ. ಇದೊಂದು ಅವೈಜ್ಞಾನಿಕ ಕ್ರಮ. ಒಂದಕ್ಕೆ ಹತ್ತರಷ್ಟು ಶುಲ್ಕ ಏರಿಸಿ ಕೇಂದ್ರ ಸರ್ಕಾರ ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.
ದ್ವಿಚಕ್ರವಾಹನ ಸವಾರರು ಮನೆಯಿಂದ ಗಾಡಿ ಹೊರತೆಗೆಯುವುದಕ್ಕೆ ಭಯಪಡುವಂತಾಗಿದೆ. ಸರ್ಕಾರ ಈ ಕೂಡಲೆ ಎಚ್ಚೆತ್ತು ಕಾಯ್ದೆಯನ್ನ ಹಿಂಪಡೆಯಬೇಕು ಎಂದ ವಾಟಾಳ್ ನಾಗರಾಜ್ ಆಗ್ರಹಿಸಿದರು.

key words : kannada-vatal-nagaraj-traffic-constable-at-mysore-protest