ಮೈಸೂರು, ಸೆಪ್ಟೆಂಬರ್ 08, 2019 (www.justkannada.in): ರಾಜ್ಯದಲ್ಲಿ ಮೂವರು ಡಿಸಿಎಂಗಳ ಜತೆಗೆ ಮತ್ತೆ ಇಬ್ಬರು ಡಿಸಿಎಂ ಹುದ್ದೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಯಾವಾಗ ಯಾರಿಗೆ ಡಿಸಿಎಂ ಮಾಡಬೇಕು, ಎಷ್ಟು ಡಿಸಿಎಂ ಮಾಡಬೇಕು ಅನ್ನೋದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು.ಅದು ಅವರ ಪರಮೋಚ್ಚ ಅಧಿಕಾರಿವಾಗಿದೆ ಎಂದುಮೈಸೂರಿನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ನೆರೆ ಭಿತಿಯಲ್ಲಿ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳು. ಈಗಾಗಲೇ ನಮ ಮುಖ್ಯಮಂತ್ರಿಗಳು ಪ್ರಧಾನಿಗಳ ಜತೆ ಮಾತನಾಡಿದ್ದಾರೆ. ಆದಷ್ಟು ಬೇಗೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗಲಿದೆ. ಪ್ರಧಾನಿಗಳು ರಾಜ್ಯಕ್ಕೆ ಬಂದು ನೆರೆ ಪರಿಹಾರ ಘೋಷಣೆ ಮಾಡಿದ್ದಾರೆ ಅನ್ನೋ ವಿಚಾರ.ಪ್ರಧಾನಿಗಳು ಎಲ್ಲೆಂದರಲ್ಲೇ ಬಹಿರಂಗವಾಗಿ ಘೋಷಣೆ ಮಾಡೋಕ್ಕೆ ಆಗುತ್ತಾ.? ಎಂದು ಸವದಿ ಹೇಳಿದ್ದಾರೆ.