ತುಮಕೂರು,ಸೆ,9,2019(www.justkannada.in) : ಇನ್ನು ನಾಲ್ಕು ತಿಂಗಳಷ್ಟೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ತುಮಕೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ರಾಜೀನಾಮೆ ಕೊಟ್ಟಾಗ ಖುಷಿಯಿಂದ ಹೊರಗೆ ಬಂದೆ. ನಾನು ಪಾಪದ ಹಣ ನೀಡಿ ಸರ್ಕಾರ ಉಳಿಸಿಕೊಳ್ಳಬಹುದಿತ್ತು. 20-30 ಕೋಟಿ ಪಾಪದ ಹಣ ನೀಡಿ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಆದರೆ ಅದರ ಅವಶ್ಯಕತೆ ನನಗಿರಲಿಲ್ಲ. ದೇವರು ಮತ್ತು ಜನರು ಕೊಟ್ಟ ಅಧಿಕಾರ ಎಂದರು.
ನಾನು ಮನೆಯಲ್ಲಿ ಹೆದರಿ ಕೂರುವುದಿಲ್ಲ. ನಿಮಗಾಗಿ ನಾನು ಹೋರಾಟ ಮಾಡುತ್ತೇನೆ. ಜನರು ಪ್ರವಾಹದಿಂದ ಬೀದಿಯಲ್ಲಿ ಮಲಗುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಎಲ್ಲಿದ್ದೀಯಪ್ಪ ಕುಮಾರ ಎನ್ನುತ್ತಿದ್ದರು. ಈಗ ಆ ಮಾತೆ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದರು.
Key words: BJP government – only -4 months- Former CM- HD Kumaraswamy.