ಬೆಂಗಳೂರು, 10, 2019 (www.justkannada.in): ವಿನಯ್’ರಾಜ್ಕುಮಾರ್ ಬಾಕ್ಸರ್ ಆಗಲು ಹೊರಟಿದ್ದಾರೆ.
ಹೌದು. ಭಿನ್ನ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನ ರಂಜಿಸ್ತಿರೋ ವಿನಯ್ ಇದೀಗ ಬಾಕ್ಸಿಂಗ್ ರಿಂಗ್ಗೆ ಇಳಿದಿದ್ದಾರೆ.
ಬಾಕ್ಸಿಂಗ್ ರಿಂಗ್ಗೆ ಎಂಟ್ರಿ ಕೊಟ್ಟ ದೊಡ್ಮನೆ ಮೊಮ್ಮಗನಿಗೆ ಜೊತೆಯಾದ ಅನುಷಾ ರಂಗನಾಥ್ ಸಾಥ್ ನೀಡಲಿದ್ಧಾರೆ.
ಪುಷ್ಕರ್ ಫಿಲ್ಮಂ ಬ್ಯಾನರ್ನಲ್ಲಿ ಚಿತ್ರ ಸೆಟ್ಟೇರಿದ್ದು ಚಿತ್ರದ ಮುಹೂರ್ತ ಇತ್ತೀಚೆಗೆ ಸಿಂಪಲ್ ಆಗಿ ನೆರವೇರಿದೆ. ಚಿತ್ರಕ್ಕೆ ‘ಟೆನ್’ ಎಂದು ಹೆಸರಿಟ್ಟಿದ್ದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.