ಕೋಲ್ಕತ್ತಾ, 10, 2019 (www.justkannada.in): ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಬಂಧನದ ಭೀತಿಯಿಂದ ಪಾರಾಗಿದ್ದಾರೆ.
ಇತ್ತೀಚೆಗೆ ಕೋಲ್ಕತ್ತಾದ ಆಲಿಪೋರಾ ಕೋರ್ಟ್, 15 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿತ್ತು. ಒಂದು ವೇಳೆ ನಿಗದಿತ ದಿನದೊಳಗೆ ಹಾಜರಾಗದಿದ್ರೆ, ಶಮಿಯನ್ನು ಬಂಧಿಸುವಂತೆ ಅರೆಸ್ಟ್ ವಾರೆಂಟ್ ನೀಡಿತ್ತು.
ಇದೀಗ ಇದೇ ಕೋರ್ಟ್ ಶಮಿ ವಿರುದ್ಧ ಹೊರಡಿಸಿದ್ದ ಅರೆಸ್ಟ್ ವಾರೆಂಟ್ಗೆ ತಡೆ ನೀಡಿದೆ. ಇದರಿಂದಾಗಿ ಮೊಹಮ್ಮದ್ ಶಮಿ ಬಂಧನ ಭೀತಿಯಿಂದ ಪಾರಾಗಿದ್ದಾರೆ.