ಮೈಸೂರಿನ ಈ ‘ ಬೇಬಿ ಆಸ್ಟ್ರೋನಾಟ್ ‘ ಗೆ ಚಂದ್ರನ ಮೇಲೆ ಕಾಲಿಡುವಾಸೆ..!

 

ಮೈಸೂರು, ಸೆ.10, 2019 : (www.justkannada.in news ) ಇಸ್ರೋ ವಿಜ್ಞಾನಿಗಳ ‘ಚಂದ್ರಯಾನ ‘ ಸಾಹಸ ಹಲವರಲ್ಲಿ ಅನ್ವೇಷಣೆ ಬಗೆಗೆ ಹೊಸ ಉತ್ಸಾಹ ಮೂಡಿಸಿದೆ. ಚಂದ್ರನನ್ನು ಮುಟ್ಟಿಯೇ ತೀರಬೇಕು ಎಂಬ ಬಯಕೆಯನ್ನು ಚಿಗುರಿಸಿದೆ. ಈ ಪೈಕಿ ಬಾಹ್ಯಕಾಶದ ಬಗ್ಗೆ ಮೈಸೂರಿನ ಆರು ವರ್ಷದ ಪೋರನ ಆಸಕ್ತಿ, ಬುದ್ಧಿವಂತಿಕೆ ನಿಜಕ್ಕೂ ತೀವ್ರ ಕುತೂಹಲ ಮೂಡಿಸುತ್ತದೆ.

ಲಕ್ಷ್ಮೀಕಾಂತ ನಗರದ ನಿವಾಸಿ ಕಿರಣ್ ಹಾಗೂ ಯಮುನಾ ಕಿರಣ್ ದಂಪತಿಯ ಪುತ್ರ ಆರು ವರ್ಷದ ಶ್ರೀಕೇಶವ್ ಕೌಂಡಿನ್ಯ , ‘ ಬೇಬಿ ಆಸ್ಟ್ರೋನಾಟ್ ‘ಎಂದೇ ಆಪ್ತ ವಲಯದಲ್ಲಿ ಹಾಗೂ ಇಸ್ರೋ ವಿಜ್ಞಾನಿ ಬಳಗದಲ್ಲಿ ಫೇಮಸ್.

ಬಾಹ್ಯಾಕಾಶ ವಿಷಯದಲ್ಲಿ ಇತನಿಗೆ ಯಾರು ಇಲ್ಲ ಸಾಟಿ. ಈತನ ಪ್ರತಿಭೆ ಕಂಡು ಖುದ್ದು ಇಸ್ರೋ ವಿಜ್ಞಾನಿಗಳೇ ದಂಗಾಗಿದ್ದಾರೆ. ತನ್ನ ಪ್ರತಿಯೊಂದು ಸ್ಪರ್ಧೆಗೂ ಯಾವುದೇ ಅರ್ಹತಾ ಸುತ್ತು ಎದುರಿಸದೆ ನೇರವಾಗಿ ಭಾಗವಹಿಸುವ ಅವಕಾಶವನ್ನು ಇಸ್ರೋ ನೀಡಿದೆ ಎಂದರೆ ಈ ಬಾಲಕನ ಸಾಮರ್ಥ್ಯ ಎಂಥದ್ದು ನೀವೆ ಊಹಿಸಿ.
ಬಾಲಕನ ತಂದೆ ಕಿರಣ್ ಎಂಜಿನಿಯರ್, ಸದ್ಯ ಕುವೈಟ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಕೌಂಡಿನ್ಯ ತನ್ನ ತಾಯಿ ಜತೆ ಮೈಸೂರಲ್ಲಿ ನೆಲೆಸಿದ್ದು ಒಂದನೆ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಹುಟ್ಟಿದ್ದು ಜಾರ್ಖಂಡ್ ನಲ್ಲಿ. ಹಾಗಾಗಿ ಕನ್ನಡದ ಜ್ಞಾನ ಅಷ್ಟೇನು ಇಲ್ಲ. ಆದರೆ ಕರ್ನಾಟಕದ ಬಗ್ಗೆ ಬಾಯ್ ತುದಿಯಲ್ಲೇ ಮಾಹಿತಿ. ಜಿಲ್ಲೆಗಳೆಷ್ಟು, ರಾಜಧಾನಿ ಯಾವುದು ಎಂಬುದನ್ನು ಕ್ಷಣಾರ್ಧದಲ್ಲಿ ಉತ್ತರಿಸುತ್ತಾನೆ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸಿಮೀತವಾಗಿಲ್ಲ, ಪ್ರಪಂಚದ ಯಾವುದೇ ದೇಶದ ರಾಜಧಾನಿ, ಅಧ್ಯಕ್ಷರ ಹೆಸರನ್ನು ಕೇಳಿದರು ಅದಕ್ಕೆ ಕರಾರುವಕ್ಕಾದ ಉತ್ತರ ನೀಡುತ್ತಾನೆ ಈ ಪೋರ.

ಇಸ್ರೋ ನಡೆಸುವ ಬಾಹ್ಯಕಾಶಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸುವ ಈ ಬಾಲಕ, ವಿಜ್ಞಾನಿಗಳೇ ಉಬ್ಬೇರಿಸುವಂತೆ ಮಾಡಿದ್ದಾನೆ. ಇತನ ಬುದ್ಧಿವಂತಿಕೆ ಸಲುವಾಗಿ ಕೌಂಡಿನ್ಯನ ಹೆಸರು ‘ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ‘ ನಲ್ಲಿ ದಾಖಲಾಗಿದೆ. ಇದಕ್ಕಿಂತ ಮುಖ್ಯವಾಗಿ ಚಂದ್ರನಲ್ಲಿ ಕಾಲಿಡಬೇಕು ಎಂಬ ಬಾಲಕನ ತುಡಿತ ಆಶ್ಚರ್ಯವೆನಿಸುತ್ತದೆ.

ಈಗಾಗಲೇ ಬಾಹ್ಯಾಕಾಶದ ಬಗ್ಗೆ ಹೆಚ್ಚಿನ ಅದ್ಯಯನ ಮಾಡಲು ಸಹಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋರ ಕೌಂಡಿನ್ಯ ಪತ್ರ ಬರೆದಿದ್ದಾನೆ ಎಂಬುದು ವಿಶೇಷ. ಪ್ರಧಾನಿ ಕಾರ್ಯಾಲಯದವರು ಈ ಪತ್ರವನ್ನು ಇಸ್ರೋಗೆ ಶಿಫಾರಸ್ಸು ಮಾಡಿದ್ದರು. ಆದ್ದರಿಂದ ಇಸ್ರೋದಿಂದ ಬಾಲಕನಿಗೆ ಪ್ರತ್ಯುತ್ತರ ಸಹ ಲಭಿಸಿದೆ.

key words : mysore-baby-astronaut-keshav-6years-boy-write-a-letter-to -ISRO-to-seek-support