ಮೈಸೂರು , ಮಾ.೦೧, ೨೦೨೪ : (justkannada ̤ in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರ್ಯಾಂಕ್ ನಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಕೆಎಸ್ ಒಯು (Karnataka State Open University – KSOU) ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಆರ್.ಹೇಮಲತಾ ವಿರುದ್ಧ ಈ ಬಗ್ಗೆ ಗಂಭೀರ ಆರೋಪ ಮಾಡಿ ಪ್ರಾಧ್ಯಾಪಕ ಪ್ರೊ.ತೇಜಸ್ವಿ ನವಿಲೂರು ಪತ್ರ ಬರೆದಿದದ್ದಾರೆ.
ಮುಕ್ತ ವಿವಿಯ ಕುಲಪತಿ, ಕುಲಸಚಿವ, ಡೀನ್‌ಗೆ , ಪ್ರಾಧ್ಯಾಪಕ ಪ್ರೊ.ತೇಜಸ್ವಿ ನವಿಲೂರು ಬರೆದಿರುವ ಪತ್ರದ ಸಾರಾಂಶ ಹೀಗಿದೆ.
ಬಿಸ್‌ನೆಸ್ ಪಾರ್ಟ್‌ನರ್‌ಗೆ ಗೋಲ್ಡ್‌ಮೆಡಲ್. ರೇಡಿಯೋ ಜಾಕಿ ಪಿ.ಅವಿನಾಶ್ ಪ್ರಸಾದ್‌ಗೆ ಪ್ರಥಮ ರ್ಯಾಂಕ್. ಡಾ.ಆರ್.ಹೇಮಲತಾ ಹತ್ತು ವರ್ಷದಿಂದ ನಿಯಮ ಬಾಹಿರವಾಗಿ ವ್ಯಾಪಾರ ಚಟುವಟಿಕೆಯಲ್ಲಿ ಭಾಗಿ.
ಫಿಟ್‌ನೆಸ್ ಸಲಹೆ, ತೂಕ ಇಳಿಸುವ ಉತ್ಪನ್ನಗಳ ಮಾರಾಟ ಮಾಡುತ್ತಿರುವ ಡಾ.ಹೇಮಲತಾ. ಪಿಎಚ್‌ಡಿ ಡಾಕ್ಟರ್ ಅನ್ನೇ ವೈದ್ಯಕೀಯ ಡಾಕ್ಟರ್ ಎಂಬಂತೆ ಬಿಂಬಿಸಿಕೊಂಡು ಬ್ಯುಸ್‌ನೆಸ್.
ಈ ಬ್ಯುಸ್‌ನೆಸ್‌ನಲ್ಲಿ ಪಾರ್ಟ್‌ನರ್ ಆಗಿರುವ ಕಾರಣಕ್ಕೆ ರೇಡಿಯೋ ಜಾಕಿ ಅವಿನಾಶ್ ಪ್ರಸಾದ್‌ಗೆ ಪ್ರಥಮ ರ್ಯಾಂಕ್ ನೀಡಿದ್ದಾರೆ. ಹೀಗಾಗಿ ಪತ್ರಿಕೋದ್ಯಮ ವಿಭಾಗದ ರ್ಯಾಂಕ್ ಪಟ್ಟಿ ರದ್ದು ಮಾಡಬೇಕು. ಡಾ.ಹೇಮಲತಾ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪತ್ರದಲ್ಲಿ ಪ್ರೊ.ತೇಜಸ್ವಿ ನವಿಲೂರು ಆಗ್ರಹ.
ಕುಲಪತಿ ಪ್ರತಿಕ್ರಿಯೆ :
ಪ್ರಾಧ್ಯಾಪಕ ಪ್ರೊ.ತೇಜಸ್ವಿ ನವಿಲೂರು ಬರೆದಿರುವ ಪತ್ರದ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ಹಲಸೆ, ಪತ್ರಿಕೋಧ್ಯಮ ವಿಭಾಗದ ರ್ಯಾಂಕ್ ಪಟ್ಟಿಗೆ ಸಂಬಂಧಿಸಿದಂತೆ ದೂರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪಟ್ಟಿ ಪರಿಶೀಲಿಸುವಂತೆ ಪರೀಕ್ಷಾಂಗ ಕುಲಸಚಿವರಿಗೆ ತಿಳಿಸಿದ್ದೇನೆ. ಅವರ ಮಾಹಿತಿ ಆಧಾರಿಸಿ ಮುಂದಿನ ಕ್ರಮ ಎಂದರು.
ಮಾರ್ಚ್ 3ರಂದು ನಡೆಯಲಿರುವ ಕೆಎಸ್‌ಒಯು ಘಟಿಕೋತ್ಸವ. ಘಟಿಕೋತ್ಸವದಲ್ಲಿ ಪ್ರದಾನವಾಗಬೇಕಿರುವ ಗೋಲ್ಡ್ ಮೆಡಲ್.
KEY WORDS : KSOU – VC – JOURNALISUM – DEPARTMENT – RANK – CONTROVERSY-