ನವದೆಹಲಿ,ಸೆ,13,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಕಸ್ಟಡಿಯನ್ನ ಸೆಪ್ಟಂಬರ್ 17ರವರೆಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ನೀಡಿದೆ.
ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಡಿ ಅಧಿಕಾರಿಗಳು ಕೋರ್ಟ್ ಗೆ ಹಾಜರು ಪಡಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ರೋಸ್ ಅವೆನ್ಯೂ ಕೋರ್ಟ್, ಸೆಪ್ಟಂಬರ್ 17ರವರೆಗೆ ಇಡಿ ಕಸ್ಟಡಿ ಅವಧಿ ವಿಸ್ತರಿಸಿ ಆದೇಶಿಸಿದೆ.
ಮೊದಲು ಡಿ.ಕೆ ಶಿವಕುಮಾರ್ ಗೆ ಅಗತ್ಯ ವೈದ್ಯಕೀಯ ನೆರವು ನೀಡಿ. ಪ್ರತಿದಿನ ಎರಡು ಬಾರಿ ಡಿಕೆಶಿ ವೈದ್ಯಕೀಯ ತಪಾಸಣೆ ನಡೆಸಬೇಕು. ನಂತರ ವಿಚಾರಣೆ ಮುಂದುವರೆಸಿ ಎಂದು ತನಿಖಾಧಿಕಾರಿಗೆ ನ್ಯಾಯಾಧೀಶರು ಸೂಚನೆ ನೀಡಿದರು. ಹಾಗೆಯೇ ಜಾಮೀನು ಅರ್ಜಿಗೆ ಸೋಮವಾರ ಆಕ್ಷೇಪಣೆ ಸಲ್ಲಿಸುವಂತೆ ಕೋರ್ಟ್ ಇಡಿಗೆ ಸೂಚನೆ ನೀಡಿತು.
ಇಡಿ ಪರವಾದ ಮಂಡಿಸಿದ್ದ ಇಡಿ ಪರ ವಕೀಲ ಕೆ.ಎಂ ನಟರಾಜು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ವಿಸ್ತರಿಸುವಂತೆ ಮನವಿ ಮಾಡಿದ್ದರು. ಡಿಕೆಶಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ಇಡಿ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿದ್ದಾರೆ. 800 ಕೋಟಿಯಷ್ಟು ವ್ಯವಹಾರ ಮಾಡಿದ್ದಾರೆ. ಇದು ದೇಶದ ಆರ್ಥಿಕತೆಗೆ ಆತಂಕಕಾರಿ. ಇಡಿ ವಿಚಾರಣೆ ವೇಳೆ ಅನಗತ್ಯವಾದ ಸುದೀರ್ಘ ಉತ್ತರ ನೀಡಿದ್ದಾರೆ ಹೀಗಾಗಿ ಮತ್ತೆ 5 ದಿನಗಳವರೆಗೆ ಇಡಿ ಕಸ್ಟಡಿಗೆ ನೀಡುವಂತೆ ವಾದ ಮಂಡಿಸಿದ್ದರು.
ಇದೇ ವೇಳೆ ಡಿಕೆ ಶಿವಕುಮಾರ್ ಪರ ವಾದ ಮಂಡಿಸಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ, ಇಲ್ಲಿಯವರೆಗೆ ಇಡಿಗೆ ನೂರಾರು ಗಂಟೆಗಳ ಕಾಲ ಸಮಯ ಸಿಕ್ಕಿದೆ. 100 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದ್ದಾರೆ. ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ವಾದ. 170/108 ಬಿಪಿ ಡಿಕೆ ಶಿವಕುಮಾರ್ ಗಿದೆ. ಡಿಕೆಶಿ ಅವರ ಆರೋಗ್ಯ ಪರಿಸ್ಥಿತಿಯನ್ನ ಇಡಿ ಮುಚ್ಚಿಟ್ಟಿದೆ. ಡಿಕೆಶಿ ಇಂದು ಆಸ್ಪತ್ರೆಗೆ ದಾಖಲಾಗಬೇಕು. ಕೋರ್ಟ್ ಏನೇ ಆದೇಶ ನೀಡಿದರೂ ಆಸ್ಪತ್ರೆಗೆ ದಾಖಲಾಗಬೇಕು ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿದ್ದರು.
Key words: New Delhi- Rose Avenue Court- orders- extension – ED custody – DK Sivakumar