ಬೆಂಗಳೂರು,ಮಾರ್ಚ್,20,2024(www.justkannada.in): ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಟೀಕಿಸಿದ್ದ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿ, ನಾನೇ ಸ್ಟ್ರಾಂಗ್ ಸಿಎಂ ಎನ್ನುವವರು ವೀಕ್ ಆಗಿರುತ್ತಾರೆ. ಅಮೇರಿಕಾ ಅಧ್ಯಕ್ಷರು ಮೋದಿ ಅವರನ್ನ ಹೊಗಳಿದ್ದರು ವಿದೇಶದ ನಾಯಕರು ಸಹ ಪ್ರಧಾನಿ ಮೋದಿ ಅವರನ್ನ ಬಲಿಷ್ಠ ನಾಯಕ ಎಂದು ಒಪ್ಪಿದ್ದಾರೆ. ಆದ್ರೆ ನಾನೇ ಸ್ಟ್ರಾಂಗ್ ಎನ್ನುವ ನಿಮ್ಮ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.
ಐದು ವರ್ಷ ಸಿಎಂ ಆಗಿರುವ ಖಾತ್ರಿ ಇಲ್ಲ. ನಾನೇ ಸಿಎಂ ಎಂದು ಹೇಳುವ ಹೇಳಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಸಚಿವರು ಶಾಸಕರೇ ನಿಮ್ಮ ಆಡಳಿತದ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಕಾಲೆಳೆದರು.
Key words: I am – strong CM – weak-CT Ravi -Tong -Siddaramaiah.