ಈ ಬಾರಿ ನಾನು ಗೆಲ್ಲುವುದು ಶೇ.100ರಷ್ಟು ಖಚಿತ – ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ವಿಶ್ವಾಸ.

ಕನಕಪುರ,ಮಾರ್ಚ್,25,2024(www.justkannada.in): ಲೋಖಸಭೆ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಸಿ.ಎನ್ ಮಂಜುನಾಥ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಕನಕಪುರದಲ್ಲಿ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್, ಕನಕಪುರದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಭೆ ನನಗೆ ಆತ್ಮವಿಶ್ವಾಸ ಹಿಮ್ಮಡಿಗೊಳಿಸಿದೆ. ಉರಿಬಿಸಲಿನಲ್ಲೂ ಜನರು ಕಿಕ್ಕಿರಿದು ತುಂಬಿದ್ದರು. ಈ ಬಾರಿ ನಾನು ಗೆಲ್ಲುವುದು ಶೇ. 100 ರಷ್ಟು ಖಚಿತವಾಗಿದೆ. ಟೀಕೆ ಟಿಪ್ಪಣಿಗಳಿಗೆ ನಗುವೇ ನನ್ನ ಉತ್ತರ ಎಂದರು.

ಮಂಜುನಾಥ್ ಅವರಿಗೆ ಕ್ಷೇತ್ರ ಪರಿಚಯ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.  ನನಗೆ ಕ್ಷೇತ್ರ ಪರಿಚಯ ಇಲ್ಲದೇ ಇರಬಹುದು ಆದರೆ ಜನ ಪರಿಚಯ ಇದ್ದಾರೆ. ನಿಮ್ಮ ಋಣ ತೀರಿಸುತ್ತೇವೆ ಅಂತಾ ಕ್ಷೇತ್ರದ ಜನರೇ ಹೇಳುತ್ತಿದ್ದಾರೆ. ಹೀಗಾಗಿ ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ನಗುವೇ ನನ್ನ ಉತ್ತರ ಎಂದು ಮಂಜುನಾಥ್ ತಿಳಿಸಿದರು.

Key words: I am -100% – win – BJP candidate -Dr. CN Manjunath – confident.