ಚಿತ್ರದುರ್ಗ,ಮಾರ್ಚ್,28,2024 (www.justkannada.in): ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪುತ್ರನಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಶಾಸಕ ಎಂ.ಚಂದ್ರಪ್ಪ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಾತನಾಡಿದ ಶಾಸಕ ಎಂ.ಚಂದ್ರಪ್ಪ, ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಟಿಕೆಟ್ ಕೈತಪ್ಪಿದ್ದು. ನಿನ್ನೆ ಮಧ್ಯಾಹ್ನದವರೆಗೂ ನನ್ನ ಮಗನ ಹೆಸರು ಫೈನಲ್ ಆಗಿತ್ತು. ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿಲ್ಲ ಅಂದ್ರೆ ಕ್ಯಾಂಪೇನ್ ಮಾಡಲ್ಲ ಎಂದಿದ್ದಾರೆ. ಯಡಿಯೂರಪ್ಪ ಹೈಕಮಾಂಡ್ ಗೆ ಹೀಗೆ ಹೇಳಿದ್ದಕ್ಕೆ ನನ್ನ ಮಗನಿಗೆ ಟಿಕೆಟ್ ಮಿಸ್ ಆಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಶಾಸಕ ಚಂದ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಮಗನಿಗೆ 2019 ರಲ್ಲಿ ಟಿಕೆಟ್ ಕೇಳಿದ್ದೆ, ಆಗ ಮುಂದಿನ ಬಾರಿ ಎಂದು ಹೇಳಿದ್ದರು. ನಾರಾಯಣಸ್ವಾಮಿ ಪರ ಕಳೆದ ಬಾರಿ 40 ಸಾವಿರ ಲೀಡ್ ಕೊಟ್ಟಿದ್ದೆ. 2024ರ ಎಲೆಕ್ಷನ್ ನಲ್ಲಿ ಟಿಕೆಟ್ ಕೊಡ್ತೇವೆ ಎಂದ ಸಂತೋಷ್ ಜೀ ಕೂಡಾ ಹೇಳಿದ್ದರು. ಇದೇ ಗೋವಿಂದ ಕಾರಜೋಳ ನನ್ನ ಮಗನ ಓಡಾಡಲು ಹೇಳಿದ್ರು. ಪಾರ್ಟಿ ಸಭೆಯಲ್ಲಿ ಕೂಡಾ ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಧ್ವನಿ ಎತ್ತಿದ್ದೆ. ಸರ್ವೇ ಬಂದವರಿಗೆ ನಮ್ಮ ಜಿಲ್ಲೆಯವರಿಗೆ ಟಿಕೆಟ್ ನೀಡಿ ಎಂದಿದ್ದೆ. ಮೋದಿ, ಅಮೀತ್ ಶಾ ಸರ್ವೇಯಲ್ಲಿ ರಘುಚಂದನ್ ಹೆಸರಿತ್ತು. ಸಿಇಸಿ ಕಮಿಟಿಯಲ್ಲಿ ನನ್ನ ಮಗನ ಹೆಸರು ಪೈನಲ್ ಆಗಿತ್ತು. ನಿನ್ನೆ ಸಂಜೆ ಯಡಿಯೂರಪ್ಪ ಅವರಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ ಎಂದು ಆರೋಪಿಸಿದರು.
ಯಡಿಯೂರಪ್ಪ KJP ಕಟ್ಟಿದ್ದಾಗ ಅವರ ಸಮಾಜದವರು ಬರ್ಲಿಲ್ಲ. ನಾನು 6 ತಿಂಗಳ ಮುಂಚೆಯೇ ನಾನು ರಾಜೀನಾಮೆ ಕೊಟ್ಟಿದ್ದೆ. ಅವರ ಮಗ ರಾಘವೇಂದ್ರ MP ಆಗಿ ಬಿಜೆಪಿಯಲ್ಲೇ ಇದ್ದರು. 2008 ರಲ್ಲಿ 110 ಸ್ಥಾನ ಗೆದ್ದಾಗ ನಮ್ಮ ಸಮಾಜದವರು ತ್ಯಾಗ ಮಾಡಿದ್ದರು. ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಗೂಳಿಹಟ್ಟಿ ಬೆಂಬಲಿಸಿದ್ದರು ಮೂರು ಮಂದಿಯಿಂದ ಯಡಿಯೂರಪ್ಪ ಸಿಎಂ ಆಗಿದ್ದರು. ಅಂತಹ ಮೂರು ಮಂದಿಯನ್ನ ಸಂಪುಟದಿಂದ ತೆಗೆದು ಅನ್ಯಾಯ ಮಾಡಿದ್ದರು. ಆದರೂ ಕೂಡಾ ನಾನು ಇವರನ್ನ ಎಂದೂ ಕೈಬಿಟ್ಟು ಹೋಗಿರಲಿಲ್ಲ. ನಮಗೆ ಯಡಿಯೂರಪ್ಪ ಈ ಬಹುಮಾನ ಕೊಟ್ಟಿದ್ದಾರೆ ಎಂಧು ಶಾಸಕ ಚಂದ್ರಪ್ಪ ಕಿಡಿಕಾರಿದ್ದಾರೆ.
550 ಕಿಲೋಮೀಟರ್ ದೂರದ ವ್ಯಕ್ತಿಗೆ ಟಿಕೆಟ್ ಕೊಡುವಂತದ್ದು ಏನಿತ್ತು. ನಮಗೆ ತುಂಬಾನೇ ಅನ್ಯಾಯ ಮಾಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ನಂತರ ಮುಂದಿನ ನಿರ್ಧಾರ ಮಾಡುತ್ತೇನೆ. ವಿಜಯೇಂದ್ರ ಯುವಕ ಎಂದು ಅಧ್ಯಕ್ಷ ಮಾಡಿದ್ದಾರೆ, ನನ್ನ ಮಗನಿಗೆ ಟಿಕೆಟ್ ಕೊಡ್ಲಿಲ್ಲ. ನಮ್ಮ ಸಮಾಜದ ಎಲ್ಲರೂ ಕೈ ಬಿಟ್ಟು ಹೋಗಿದ್ದಾರೆ, ನಾನು ಮಾತ್ರ ಆಧಾರವಾಗಿದ್ದೆ. ಈಗ ನಮ್ಮ ಸಮಾಜ ಮುಂದಿನ ಹೆಜ್ಜೆ ಇಡುತ್ತದೆ. ಮೋದಿ ದೇಶ & ರಾಜ್ಯಕ್ಕೆ ಅಗತ್ಯ ಎಂದು ನಾನು ಭಾವಿಸಿದ್ದೇನೆ. ಬೊಮ್ಮಾಯಿ ಸಂಪುಟದಲ್ಲಿ ನನಗೆ ಅನ್ಯಾಯ ಮಾಡಿದ್ರು. ಹಗಲು ರಾತ್ರಿ ಯಡಿಯೂರಪ್ಪ ಮನೆಗೆ ನಾನು ದುಡಿದೆ, ನಾನು ಏನೂ ಅನ್ಯಾಯ ಮಾಡಿದ್ದೆ ಎಂದು ಶಾಸಕ ಎಂ.ಚಂದ್ರಪ್ಪ ತೀವ್ರ ಬೇಸರ ಹೊರಹಾಕಿದರು.
ನಿನ್ನೆ ಮಧ್ಯಾಹ್ನ ಟಿಕೆಟ್ ಘೋಷಣೆ ಮಾಡ್ತಾ ಇದ್ರು, ಇದನ್ನ ತಪ್ಪಿಸಿದ್ದಾರೆ. ನೂರಾರು ಬಾರಿ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೆ, ಅವರು ಕಾಳಜಿ ತೋರಿಲ್ಲ. ಯಡಿಯೂರಪ್ಪ ಕಿಚನ್ ಕ್ಯಾಬಿನೆಟ್ ನಲ್ಲಿ ಇದಿದ್ದಕ್ಕೆ ಈ ಬಹುಮಾನ. KJP ನಿಂತಾಗ ನಯಾ ಪೈಸೆ ಪಾರ್ಟಿ ಫಂಡ್ ಕೊಡಲಿಲ್ಲ ಎಂದರು.
ನಮ್ಮ ದುರ್ಗದಲ್ಲಿ ಮಹಾನ್ ನಾಯಕ ಇದ್ದಾನೆ, ಜಾಸ್ತಿ ಆಗಿದೆ. ಈಗಾಗಲೇ ಶಾಸ್ತಿ ಆಗಿದೆ, ಮುಂದಿಯೂ ಶಾಸ್ತಿ ಆಗುತ್ತದೆ. ನಮ್ಮ ಪಕ್ಷದಲ್ಲಿ ಸೋತವರನ್ನ ಕರೆತಂದು MLC ಮಾಡಿದ್ವಿ. ಅಷ್ಟು ನಿಯತ್ತಿಂದ ಮಾಡಿದ್ದೇವೆ, ನಾನು ನಂಬಿಸಿ ಮೋಸ ಮಾಡಲ್ಲ. ಆ ಮಹಾನ್ ನಾಯಕನನ್ನ ಅರ್ಥ ಮಾಡಿಕೊಂಡು ಹೇಳುತ್ತೇನೆ. ಮದಕರಿ ಕೋಟೆಗೆ ನುಗ್ಗಲು ಸಂಧಿ ತೋರಿಸಲು ಇರ್ಬೇಕು, ಅಂಥವರು ಇದ್ದಾರೆ. ಒಳಗೆ ಬಂದಾಗ ಏನಾಯ್ತು, ಮುಂದೆ ಮಹಾನ್ ನಾಯಕನಿಗೆ ಅದೇ ಆಗುತ್ತೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ತಿಪ್ಪಾರೆಡ್ಡಿ ವಿರುದ್ದ ಚಂದ್ರಪ್ಪ ಗುಡುಗಿದ
ಈ ಮೂಲಕ ಬಿಎಸ್ ವೈ ಪರಮಾಪ್ತ ಶಾಸಕ ಎಂ.ಚಂದ್ರಪ್ಪ ಇದೀಗ ಬಿಎಸ್ ವೈ ವಿರುದ್ದವೇ ಸಮರ ಸಾರಿಲು ಮುಂದಾದ್ರಾ ಹಾಗಾದರೇ ಚಂದ್ರಪ್ಪ ಅವರ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Key words: MLA, M. Chandrappa, against ,BSY