MYSORE : ತಂದೆ, ಸಚಿವ ಎಚ್‌ಸಿ ಮಹದೇವಪ್ಪ ಅವರ ಹಾದಿಯಲ್ಲೇ ಮುಂದುವರಿಯಬೇಕೆಂದು ರಾಜಕೀಯ ರಂಗಕ್ಕೆ ಬಂದ ಸುನೀಲ್ ಬೋಸ್ ಅವರು ಸಿಎಂ ಸಿದ್ದರಾಮಯ್ಯ ಅವರ ಪುತ್ರ ದಿ. ರಾಕೇಶ್ ಅವರ ಆಪ್ತ ಗೆಳೆಯರಾಗಿದ್ದರು.
ತಿ. ನರಸೀಪುರ ಕೆಡಿಪಿ ಸಮಿತಿಯ ಪದನಿಮಿತ್ತ ಸದಸ್ಯ, ದ್ವಿತೀಯ ಪಿಯುಸಿ ವ್ಯಾಸಂಗ ಇವರ ವಿದ್ಯಾರ್ಹತೆ.
2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ತಿ. ನರಸೀಪುರ ವಿಧಾನಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದರು.
ಕಳೆದ ವರ್ಷದ ಆಗಸ್ಟ್ . 5 ರಂದು ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಮಿತಿಯ ಪದ ನಿಮಿತ್ತ ಸದಸ್ಯರಾಗಿ ನೇಮಕ.
ಎಸ್ಸಿ, ಎಸ್‌ಟಿ ವರ್ಗದ 20 ಅಂಶಗಳ ಕಾರ್ಯಕ್ರಮಗಳನ್ನೊಳಗೊಂಡಂತೆ ಸರ್ಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬೋಸ್ ಅವರನ್ನು ನೇಮಿಸಲಾಗಿತ್ತು. ಸುನೀಲ್ ಬೋಸ್ ಅವರು 2017ರ ಏಪ್ರಿಲ್‌ನಲ್ಲಿ ಶ್ರೀನಿವಾಸಪ್ರಸಾದ್ ರಾಜೀನಾಮೆಯಿಂದ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲೂ ಆಕಾಂಕ್ಷಿಯಾಗಿದ್ದರು, ಎರಡು ಬಾರಿಯೂ ಟಿಕೆಟ್ ದೊರೆತಿರಲಿಲ್ಲ. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
KEY WORDS : Sunil Bose, congress, candidate, Chamarajanagar