ಬೆಂಗಳೂರು, ಸೆಪ್ಟೆಂಬರ್ 16, 2019 (www.justkannada.in): ಸಂಸದೆ, ನಟಿ ಸುಮಲತಾ ಅಂಬರೀಶ್ ಅವರಿಗೆ ಫೇಸ್ ಬುಕ್ ನಕಲಿ ಖಾತೆಗಳ ಕಾಟ ನಿಂತಿಲ್ಲ.
ನಕಲಿ ಖಾತೆ ಮುಂದುವರಿಸಿದವರ ವಿರುದ್ಧ ಮತ್ತೆ ಸುಮಲತಾ ಕಿಡಿ ಕಾರಿದ್ದಾರೆ. ತಾನು ಇಷ್ಟು ಎಚ್ಚರಿಕೆ ನೀಡಿದ ಮೇಲೂ ಈ ಬೆಳವಣಿಗೆ ನಿಂತಿಲ್ಲ. ಈ ಪೇಜ್ ಬಗ್ಗೆ ವರದಿ ಮಾಡಿ.
ಈಗಾಗಲೇ ಸೈಬರ್ ಕ್ರೈಮ್ ಗೆ ದೂರು ನೀಡಿದ್ದೇನೆ. ಸದ್ಯದಲ್ಲೇ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಸುಮಲತಾ ಹೇಳಿಕೊಂಡಿದ್ದಾರೆ.