ಮೈಸೂರು,ಏಪ್ರಿಲ್,16,2024 (www.justkannada.in): ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು ಈ ನಡುವೆ ಇಂದು ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಜೊತೆ ಚಾಮುಂಡೇಶ್ವರಿ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ಮೊದಲು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯಕ್ರಮ ಆರಂಭಿಸಿದರು.ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಚಾಮುಂಡಿ ಬೆಟ್ಟದಲ್ಲಿ ಜನಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.
ನಂತರ ಮಂಡಕಳ್ಳಿ ಗ್ರಾಮಕ್ಕೆ ತೆರಳಿದ ಎಂ.ಲಕ್ಷ್ಮಣ್ ಗ್ರಾಮದ ಜನರ ಬಳಿ ಮತಯಾಚನೆ ಮಾಡಿದರು. ಬಳಿಕ ಕಡಕೋಳ ಗ್ರಾಮಕ್ಕೆ ತೆರಳಿ ಶ್ರೀ ಕಾಳಿಬೀರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಗ್ಯಾರಂಟಿ ಗಳ ಫಲಾನುಭವಿಗಳಾದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜನಸಭೆ ಕಾರ್ಯಕ್ರಮಕ್ಕೆ ಬಂದು ಸಿದ್ದರಾಮಯ್ಯರವರ ಕೈ ಬಲ ಪಡಿಸುವುದು ನಮ್ಮ ಕರ್ತವ್ಯ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲೂ ಅಧಿಕಾರಕ್ಕೆ ಬರಬೇಕು ಮತ್ತೆ ಒಂದು ಲಕ್ಷದ ಮಹಾಲಕ್ಷ್ಮಿ ಯೋಜನೆಗೆ ನಾವು ಭಲಾನುಭವಿಗಳಾಗುತ್ತೇವೆ ಎಂದು ಭರವಸೆಯ ಬೆಳಕು ಚೆಲ್ಲಿದರು.
ನಂತರ ಸಿಂಧುವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮತದಾನದ ಬಗ್ಗೆ ಅರಿವು ಮೂಡಿಸಿ ಮತದಾನಕ್ಕೆ ಎಷ್ಟು ಬೆಲೆ ಇದೆ. ದೇಶವನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಮತದಾನ ಮಾಡುತ್ತದೆ.ಆಗಾಗಿ ಮತದಾನಕ್ಕೆ ಹೆಚ್ಚು ಮಹತ್ವವಿದೆ. ಎಂಬುದನ್ನೇ ತಿಳಿಸುವುದರ ಮೂಲಕ ಮತಯಾಚನೆ ಮಾಡಿದರು.
ನಂತರ ದೂರ ಗ್ರಾಮಕ್ಕೆ ಭೇಟಿ ನೀಡಿ ಪಾದಯಾತ್ರೆಯ ಮೂಲಕ ಯತೀಂದ್ರ ಸಿದ್ದರಾಮಯ್ಯ ರವರು ಮತ್ತು ಲಕ್ಷ್ಮಣರವರು ಪ್ರತಿ ಮನೆ ಮನೆಗೂ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಗ್ರಾಮಸ್ಥರು ನಮ್ಮ ಕ್ಷೇತ್ರದಲ್ಲಿ ಅತ್ಯಂತ ಲೀಡ್ ನಲ್ಲಿ ಗೆಲುವು ಕೊಡುತ್ತೇವೆ ಎಂದು ಭರವಸೆ ನಿಡಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಈ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುತ್ತಿರುವ ಚುನಾವಣೆ. ನಮ್ಮ ಅಭ್ಯರ್ಥಿ ಸಾಮಾನ್ಯ ಕಾರ್ಯಕರ್ತನಾಗಿ,ಜನಪರ ಹೋರಾಟದಲ್ಲಿ ಭಾಗಿಯಾಗಿ ಹಲವಾರು ವರ್ಷದಿಂದ ಪಕ್ಷಕ್ಕೆ ದುಡಿದಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜ ಮನೆತನದವರು ರಾಜಕೀಯದಲ್ಲಿ ಇರಲಿಲ್ಲ ಅದರ ಗಂಧಗಾಳಿಯೂ ಕೂಡ ಗೊತ್ತಿಲ್ಲ. ಜನ ಸಾಮಾನ್ಯರ ಕಷ್ಟ ಸುಖ ಅರಿತಿಲ್ಲ. ಜನರ ಮಧ್ಯೆ ಬಂದು ಕೆಲಸ ಮಾಡಿಲ್ಲ ಅಂತವರಿಗೆ ಮತ ನೀಡಿದರೆ ಜನರು ಅವರ ಬಳಿ ಕೆಲಸ ಮಾಡಿಸಿಕೊಳ್ಳಲು ಕಷ್ಟ ಪಡಬೇಕು. ಆದರೆ ನಮ್ಮ ಅಭ್ಯರ್ಥಿ ಲಕ್ಷ್ಮಣ ಜನ ಸಾಮಾನ್ಯ ವ್ಯಕ್ತಿ ಜನರ ಮಧ್ಯ ಇದ್ದು ಕೆಲಸ ಮಾಡುವ ವ್ಯಕ್ತಿ. ನಿಮ್ಮ ಬೆಂಬಲವನ್ನು ನಮ್ಮ ಅಭ್ಯರ್ಥಿಗೆ ನೀಡಿದರೆ ಕಾಂಗ್ರೆಸ್ ಪಕ್ಷ ಬಲಗೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ. ನಮ್ಮ ಸರಕಾರ ಬಂದರೆ ಕೇಂದ್ರದಿಂದ 5 ನ್ಯಾಯಗಳು ಕೊಡುತ್ತವೆ. ನಿಮ್ಮ ಪರವಾಗಿ ಚಿಂತನೆ ಮಾಡುವ ಪಕ್ಷ ಇದ್ದಾರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ನಾವು ಗ್ಯಾರಂಟಿ ಯೋಜನೆ ಭರವಸೆ ಕೊಟ್ಟಿದ್ದವು ಅದನ್ನು ಈಡೇರಿಸಿದ್ದೇವೆ. ವರ್ಷಕ್ಕೆ 58 ಸಾವಿರ ಕೋಟಿ ಖರ್ಚಾಗುವ ಕಾರ್ಯಕ್ರಮ. ಮೋದಿ ಸರಕಾರ ಶ್ರೀಮಂತರಿಗೆ ಸಹಾಯ ಮಾಡುವ ಸರಕಾರ. ಬಡವರು ಸಹಾಯ ಮಾಡುವ ಸರಕಾರ ಅಲ್ಲ. ಬಿಜೆಪಿ ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಹೇಳುತ್ತಾರೆ. ಅದು ಕಾಂಗ್ರೆಸ್ ಪಕ್ಷಕ್ಕೆ ಹೇಳುವುದಲ್ಲ, ಜನರನ್ನು ಅವಹೇಳನಕಾರಿಯಾ ಹೇಳುವುದು. ನಮ್ಮ ಸರಕಾರದ ಗ್ಯಾರಂಟಿ ಕಾರ್ಡ್ ಗಳು ನಿಮ್ಮ ಮನೆ ಮನೆಗೆ ತಲುಪುತ್ತವೆ. ದಯಮಾಡಿ ನೀವು ನಮ್ಮ ಅಭ್ಯರ್ಥಿ ಗೆಲ್ಲಿಸಿ ಕೊಡಬೇಕು ನಿಮ್ಮಲ್ಲಿ ನಾನು ತಲೆ ಭಾಗಿ ಕೇಳುತ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಚಾಮುಂಡೇಶ್ವರಿ ಕ್ಷೇತ್ರವನ್ನು ಯತೀಂದ್ರ ಸಿದ್ದರಾಮಯ್ಯ ಅವರು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಕೇಂದ್ರದಲ್ಲಿ ನೂರಕ್ಕೆ ನೂರರಷ್ಟು ನಮ್ಮ ಪಕ್ಷ ಅಧಿಕಾರಕ್ಕೆ ಬಂದೆ ಬರುತ್ತೆ ಎಂಬ ನಂಬಿಕೆ ನನಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೂರು ಬಾರಿ ಒಬ್ಬರನ್ನು ಗೆಲ್ಲಿಸಿದ್ದೀರಾ. ಇಲ್ಲಿ ನೀರಿಗೆ ಹಾಹಾಕಾರವಿದೆ ಅದನ್ನು ಬಗೆಹರಿಸದೆ ಕಾಂಗ್ರೆಸ್ ಪಕ್ಷದ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ಈ ಚುನಾವಣೆಯಲ್ಲಿ 300 ಸ್ಥಾನ ಗೆದ್ದೇಗೆಲ್ಲುತ್ತೇವೆ ಏಕೆಂದರೆ ಜನ ಬಿಜೆಪಿಯವರ ಸುಳ್ಳು ಕೇಳಿ ಸಾಕಾಗಿದ್ದಾರೆ. ಜನ ಈ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸುತ್ತಾರೆ. ಮೈಸೂರು ಅಭಿವೃದ್ದಿಗೆ ಸಿದ್ದರಾಮಯ್ಯ ರವರು 3 ಸಾವಿರದ 800 ಕೋಟಿ ಕೊಟ್ಟಿದ್ದಾರೆ. ಆದರೆ ನಾವು ಮಾಡಿದ್ದು ಎಂದು ಹೇಳಿಕೊಂಡು ಬರುತ್ತಾರೆ. ನೀವೆಲ್ಲ ಎಚ್ಚರದಿಂದ ಇರಬೇಕು ಮತದಾರರೇ. ಬಿಜೆಪಿ ಅಭ್ಯರ್ಥಿಯು ಬಿಜೆಪಿ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ ಇನ್ನೂ ಜನಗಳ ಕೈ ಸಿಗುತ್ತರಾ ಎಂಬುದನ್ನು ನೀವು ತಿಳಿಯಬೇಕು. ಲಕ್ಷ್ಮಣನಂತ ವ್ಯಕ್ತಿಗೆ ವೋಟ್ ಹಾಕಿ ತಪ್ಪು ಮಾಡಿಬಿಟ್ಟೋ ಅನ್ನೋ ತರ ನಡೆದುಕೊಳ್ಳುವುದಿಲ್ಲ. ನಿಮ್ಮ ಪರ ಸಂಸತ್ತಿನಲ್ಲಿ ಧ್ವನಿ ಎತ್ತುವ ಕೆಲಸ ಮಾಡೇ ಮಾಡುತ್ತೇನೆ. ನಾನು ನಿಮ್ಮ ಹಾಗೆ ಸಾಮಾನ್ಯವಾಗಿ ಜೀವನ ಮಾಡಿರುವ ಕಾರಣ ನಿಮ್ಮ ಸಮಸ್ಯೆ ನನಗೆ ತಿಳಿದಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಹಾಲಿ, ಮಾಜಿ ಅಧ್ಯಕ್ಷರುಗಳು , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳು, ಪದಾಧಿಕಾರಿಗಳು, ಮಾಜಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರುಗಳು, ಗ್ರಾಮದ ಮುಖಂಡರುಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.
Key words: Congress, candidate, M. Laxman, campaign