೨೦ ವರ್ಷಗಳ ಹಿಂದೆ ಇದೇ ದಿನ ಮಿಂಚಿ ಮರೆಯಾಯ್ತು ತಾರೆ..!

on this day, 20 years ago south Indian film industry lost actress Soundarya

 

ಬೆಂಗಳೂರು, ಏ. 17, 2024  : (www.justkannada.in news ) ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದ ನಟಿ ಸೌಂದರ್ಯ, ತನ್ನ ಪೂರ್ಣ ಸಾಮರ್ಥ್ಯ ತಲುಪುವ ಮೊದಲೇ  ಕಣ್ಮರೆಯಾದ ತಾರೆ. ಕೇವಲ 31 ನೇ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದಿ ಬೆಳ್ಳಿತೆರೆಯಿಂದ ನಿರ್ಗಮಿಸಿದ ಮಿನುಗುತಾರೆ.

ಸಾರ್ವಕಾಲಿಕ ಉತ್ತುಂಗದಲ್ಲಿದ್ದ ಸೌಂಧರ್ಯ ರ ವೃತ್ತಿಜೀವನವು ಅಕಾಲಿಕ ಮರಣದಿಂದ ಮೊಟಕುಗೊಂಡಿತು. ಸೌಂದರ್ಯಾ ಅವರು ಸರಿಯಾಗಿ 20 ವರ್ಷಗಳ ಹಿಂದೆ, ಇದೇ ದಿನ ಅಂದ್ರೆ,  ಏಪ್ರಿಲ್ 17, 2004 ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು.

1972 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸೌಂದರ್ಯ  ಅಪ್ಪಟ ಕನ್ನಡತಿ. ಅವರು ಆರಂಭದಲ್ಲಿ ವೈದ್ಯೆಯಾಗಲು ಮೆಡಿಕಲ್‌ ವ್ಯಾಸಂಗ ಮಾಡುತ್ತಿದ್ದರು. ಆದರೆ, ಕೋರ್ಸ್‌ ಸೇರಿದ ಕೇವಲ ಒಂದು ವರ್ಷದಲ್ಲೇ ಸೌಂಧರ್ಯ,   MBBS ವ್ಯಾಸಂಗಕ್ಕೆ ತಿಲಾಂಜಲಿ ನೀಡಿದರು.

ಸೌಂದರ್ಯಾ,  ಏಪ್ರಿಲ್ 1992 ರಲ್ಲಿ ಎಸ್.ಸಿದ್ದಲಿಂಗಯ್ಯ ನಿರ್ದೇಶನದ ಕನ್ನಡ ಚಲನಚಿತ್ರ ಬಾ ನನ್ನ ಪ್ರೀತಿಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸ್ವಲ್ಪ ಸಮಯದ ನಂತರ ಜುಲೈ 1992 ರಲ್ಲಿ ಅವರು ಗಂಧರ್ವದಲ್ಲಿ ಕಾಣಿಸಿಕೊಂಡರು. ಅದೇ ವರ್ಷದಲ್ಲಿ, ವರಪ್ರಸಾದ್ ಎಂದೂ ಕರೆಯಲ್ಪಡುವ ತ್ರಿಪುರನೇನಿ ಶ್ರೀಪ್ರಸಾದ್ ನಿರ್ದೇಶನದ ಕೃಷ್ಣನೊಂದಿಗೆ ರೈತ ಭಾರತಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು, ಸೌಂದರ್ಯ ಅವರು ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಪ್ರಮುಖ ಪಾತ್ರಗಳೊಂದಿಗೆ ಪ್ರಾರಂಭಿಸಿ, ಅತ್ಯಂತ ಪ್ರೀತಿಯ ನಟಿಯಾಗಿ ಶೀಘ್ರವಾಗಿ ಪ್ರಾಮುಖ್ಯತೆಯನ್ನು ಪಡೆದರು. ತೆಲುಗು ಚಿತ್ರರಂಗ. ಆಕೆಯ ಚೊಚ್ಚಲ ತೆಲುಗು ಚಿತ್ರ ರಾಜೇಂದ್ರುಡು ಗಜೇಂದ್ರುಡು, ಎಸ್‌ವಿ ಕೃಷ್ಣಾ ರೆಡ್ಡಿ ನಿರ್ದೇಶಿಸಿದ್ದರು.

1993 ರ ತಮಿಳು ಚಲನಚಿತ್ರ ಪೊನ್ನುಮಣಿ ಭಾರಿ ಹಿಟ್ ಆದ ನಂತರ, ಸೌಂದರ್ಯ ಬಹುತೇಕ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಕಾಣಿಸಿಕೊಂಡರು. ಅರುಣಾಚಲಂ ಮತ್ತು ಪಡೆಯಪ್ಪ ಚಿತ್ರಗಳ ಮೂಲಕ ಅವರು ತಮಿಳು ಚಿತ್ರರಂಗದಲ್ಲಿಯೂ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡರು. ಅಮಿತಾಭ್ ಬಚ್ಚನ್ ಜೊತೆಗಿನ ಸೂರ್ಯವಂಶಂ ಎಂಬ ಹಿಂದಿ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರು ಬಾಲಿವುಡ್‌ನಲ್ಲಿ ಗಮನಾರ್ಹ ಛಾಪನ್ನು ಬಿಟ್ಟಿದ್ದಾರೆ.

 

 ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ದ್ವಾರಕೀಶ್.

 

1992 ರಿಂದ 2003 ರವರೆಗೆ, ಸೌಂದರ್ಯ ದಕ್ಷಿಣ ಭಾರತದ ಪ್ರಮುಖ ನಟಿಯಾಗಿ ಹೊರಹೊಮ್ಮಿದರು, ಕೇವಲ ೧೨ ವರ್ಷಗಳಲ್ಲಿ ಸರಿಸುಮಾರು  ೧೦೦ ಚಿತ್ರಗಳಲ್ಲಿ ನಟಿಸಿದ್ದರು.  ಅವರ ಅಸಾಧಾರಣ ನಟನಾ ಸಾಮರ್ಥ್ಯಕ್ಕಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದರು.

ತನ್ನ ಯಶಸ್ವಿ ನಟನಾ ವೃತ್ತಿಜೀವನದ ಜೊತೆಗೆ, ಸೌಂದರ್ಯ ಅವರು ರಾಜಕೀಯ ಕ್ಷೇತ್ರದಲ್ಲೂ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದರು.  ಈ ಸಲುವಾಗಿಯೇ , 2004 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಅದೇ ವರ್ಷದ ಏಪ್ರಿಲ್ 17 ರಂದು   BJP ಪರ ಚುನಾವಣಾ ಪ್ರಚಾರಕ್ಕಾಗಿ  ಬೆಂಗಳೂರು ನಗರದಿಂದ ಆಂಧ್ರದ ಕರೀಂನಗರಕ್ಕೆ ಹೆಲಿಕ್ಯಾಪ್ಟರ್‌ ಮೂಲಕ ತೆರಳುತ್ತಿರುವಾಗ ಅಪಘಾತಕ್ಕೀಡಾಗಿ ಮೃತ . ಆಕೆ ತನ್ನ ಸಹೋದರ ಅಮರನಾಥನೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು.

key words :  on-this-day, 20-years-ago, south, lost, actress, Soundarya

summary : 

Death. On 17 April 2004, Soundarya died in an aircraft crash along with her brother Amarnath while travelling to Karimnagar from Bengaluru during an election campaign to support Bharatiya Janata Party, which she had joined that year.