ಹುಬ್ಬಳ್ಳಿ, ಏಪ್ರಿಲ್,30,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಪೆನ್ ಡ್ರೈವ್ ಹಂಚಿಕೆ ಹಿಂದೆ ಮಹಾನಾಯಕನ ಕೈವಾಡವಿದೆ. ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ದ ಪರೋಕ್ಷವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ನಾನು ಪ್ರಜ್ವಲ್ ರೇವಣ್ಣ ವಹಿಸಿಕೊಳ್ಳುತ್ತಿಲ್ಲ. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೇ ಶಿಕ್ಷೆ ಆಗಲೇಬೇಕು. ಇನ್ನೂ 2 ಸಾವಿರ ವಿಡಿಯೋಗಳು ಇವೆಯಂತೆ ಯಾವ ಫ್ಯಾಕ್ಟರಿಯಲ್ಲಿ ತಯಾರು ಮಾಡಿದ್ರಿ. 2 ಸಾವಿರ ವಿಡಿಯೋಗಳಿದ್ದಾವೆ ಅಂದರೆ 5 ವರ್ಷ ಪ್ರಜ್ವಲ್ ರೇವಣ್ಣ ಕೆಲಸ ಮಾಡಿಲ್ಲ ಅನ್ಸಿತ್ತೆ ಎಂದು ಡಿ.ಕೆ ಶಿವಕುಮಾರ್ ವಿರುದ್ದ ಹರಿಹಾಯ್ದರು.
ಪೆನ್ ಡ್ರೈವ್ ಹಂಚಿಕೆ ಹಿಂದೆ ಮಹಾನಾಯಕನ ಕೈವಾಡವಿದೆ. ಪ್ರಕರಣದ ಹಿಂದೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ಕಳಂಕ ತರುವಂತೆ ಮಾಡಬೇಕೆಂಬ ಹುನ್ನಾರವಿದೆ. ಹಳೆಯ ಪ್ರಕರಣವನ್ನು ಈಗ ಚುನಾವಣೆ ಸಮಯದಲ್ಲಿ ಮುನ್ನೆಲೆಗೆ ತಂದಿದ್ದಾರೆ. ಈ ಪ್ರಕರಣಕ್ಕೂ ಪ್ರಧಾನಿ ಮೋದಿ ಅವರಿಗೂ ಕಾಂಗ್ರೆಸ್ ನಾಯಕರು ತಳಕು ಹಾಕಿದ್ದಾರೆ. ಇದಕ್ಕೂ ಮೋದಿಗೂ ಏನು ಸಂಬಂಧ ಎಂದು ಹೆಚ್ ಡಿಕೆ ಕಿಡಿಕಾರಿದರು.
ಸಿಎಂ ಕುಟುಂಬದಲ್ಲಿ ನಡೆದ ಪ್ರಕರಣ ನೆನಪಿಲ್ವಾ..? ಪ್ರಧಾನಿ ಮೋದಿ ನಿಮ್ಮ ಗೌರವ ಉಳಿಸಿದ್ದಕ್ಕೆ ಇದು ಬಳುವಳಿನಾ .. ಮೋದಿ ಹೆಸರು ಯಾಕೆ ತಳಕು ಹಾಕುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ದವೂ ಹೆಚ್.ಡಿಕೆ ಗುಡುಗಿದರು.
Key words: Mahanayaka, pen drive, H.D.Kumaraswamy