ಶಿವಮೊಗ್ಗ,ಮೇ,2,2024 (www.justkannada.in): ಪ್ರಜ್ವಲ್ ರೇವಣ್ಣ 400 ಹೆಣ್ಣುಮಕ್ಕಳನ್ನ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರಿ ಪರ ಪ್ರಧಾನಿ ಮೋದಿ ವೇದಿಕೆ ಹಂಚಿಕೊಂಡು ಪ್ರಚಾರ ನಡೆಸಿದ್ದಾರೆ. ಹೀಗಾಗಿ ಮೋದಿ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಜ್ವಲ್ ರೇವಣ್ಣ 400 ಹೆಣ್ಣುಮಕ್ಕಳನ್ನ ಅತ್ಯಾಚಾರ ಮಾಡಿದ್ದಾರೆ ಇದೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ. ಮೋದಿ ಇಂತಹ ವ್ಯಕ್ತಿಪರ ಪ್ರಚಾರ ಮಾಡಿದ್ದಾರೆ ಮೋದಿ ಮತಯಾಚನೆ ವೇಳೆ ಪ್ರಜ್ವಲ್ ರೇವಣ್ಣ ವಿಷಯ ಗೊತ್ತಿತ್ತು ಗೊತ್ತಿದ್ದರೂ ಬಿಜೆಪಿ ನಾಯಕರು ಗಪ್ ಚಿಪ್ ಆಗಿದ್ದರು ಎಂದು ಕಿಡಿಕಾರಿದರು.
ಮಾಸ್ ರೇಪಿಸ್ಟ್ ಪರ ಮೋದಿ ಪರಚಾರ ಮಾಡಿದ್ದಾರೆ. ಜರ್ಮನಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಮೋದಿ ಗ್ಯಾರಂಟಿ. ಈ ಮೂಲಕ ಮೋದಿ ದೇಶದ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಮೋದಿ ಅಮಿತ್ ಶಾ ದೇಶದ ಜನರ ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.
Key words: Modi, shimoga, congress, Rahul Gandhi