ತುಮಕೂರು,ಸೆ,17,2019(www.justkannada.in): ದಲಿತ ಎಂಬ ಕಾರಣಕ್ಕೆ ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ಗ್ರಾಮಕ್ಕೆ ಪ್ರವೇಶ ಮಾಡಲು ಗ್ರಾಮಸ್ಥರು ಅಡ್ಡಿಯುಂಟು ಮಾಡಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ರಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರು ಮನೆ ನಿರ್ಮಿಸಕೊಟ್ಟು ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳೊಂದಿಗೆ ಪೆಮ್ಮನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಗ್ರಾಮಕ್ಕೆ ಆಗಮಿಸುತ್ತಿದ್ದ ವೇಳೆ ಸಂಸದ ನಾರಾಯಣಸ್ವಾಮಿ ಅವರು ದಲಿತ ಎಂಬ ಕಾರಣಕ್ಕೆ ಗ್ರಾಮದ ಪ್ರವೇಶಕ್ಕೆ ಸ್ಥಳೀಯರು ನಿರಾಕರಿಸಿದ್ದರು.
ಈ ಸಂಬಂಧ ತನಿಖೆ ನಡೆಸುವಂತೆ ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಘಟನೆ ನಂತರ ಉಲ್ಟಾ ಹೊಡೆದಿರುವ ಪೆಮ್ಮನಹಳ್ಳಿ ಗ್ರಾಮಸ್ಥರು, ಸಂಪ್ರದಾಯ, ಪದ್ದತಿಗಳ ಬಗ್ಗೆ ಅವರಿಗೆ ತಿಳಿಸಿದ್ದೇವೆ ಅಷ್ಟೆ. ಸಂಸದರ ಪ್ರವೇಶಕ್ಕೆ ನಿರಾಕರಿಸಿಲ್ಲ. ಒಂದು ವೇಳೆ ಅವರಿಗೆ ನೋವಾಗಿದ್ದರೇ ಕ್ಷಮೆ ಕೋರುತ್ತೇವೆ ಎಂದು ಗ್ರಾಮಸ್ಥರು ಕ್ಷಮೆ ಕೋರಿದ್ದಾರೆ. ಈಗಲೂ ಗ್ರಾಮಕ್ಕೆ ಬರಲಿ ದೇಗುಲಕ್ಕೆ ಬರಲಿ ಇಲ್ಲಿ ಮನೆಗಳನ್ನ ಕಟ್ಟಿಸಿಕೊಡಲಿ ಎಂದು ಸ್ಥಳೀಯರು ಹೇಳಿದ್ದಾರೆ.
Key words: tumakur- barriers –MP Narayanswamy- village –Dalit-DC-instructed – investigate