100 ಕೋಟಿ ಆಫರ್ ಎಂಬ ದೇವರಾಜೇಗೌಡರ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು.

ಬೆಂಗಳೂರು,ಮೇ,18,2024 (www.justkannada.in): ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ  ಡಿ.ಕೆ ಶಿವಕುಮಾರ್ 100 ಕೋಟಿ  ರೂ. ಆಫರ್ ನೀಡಿದ್ದರು ಎಂಬ  ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡರ ಆರೋಪಕ್ಕೆ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಮಗೆ ಚುನಾವಣೆ ಬಿಟ್ಟರೇ ಬೇರೆ ಕೆಲಸ  ಇಲ್ವಾ. ವಿಷಯ ಡೈವೈರ್ಟ್ ಮಾಡಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ.  ಲೋಕಲ್ ಪಾಲಿಟಿಕ್ಸ್ ಬಗ್ಗೆ ಗಮನ ಹರಿಸ್ತಿದಿದ್ದಾರೆ. 100 ಕೋಟಿ ಆಫರ್ ಇತ್ತಂದು ಅಮಿತ್ ಶಾಗೆ ಹೇಳಬಹುದಿತ್ತಲ್ವಾ. ಹಣದ ಆಫರ್ ಕೊಟ್ಟಿದ್ದರೇ ಅಮಿತ್ ಶಾಗೆ ಹೇಳಿ ತನಿಖೆ ಮಾಡಿಸಬಹುದಿತ್ತಲ್ವಾ..?  ಹಣ ಕೊಟ್ಟಿರುವ ಬಗ್ಗೆ ವಿಡಿಯೋ ಇದ್ರೆ ರಿಲೀಸ್ ಮಾಡಲಿ.  ಪೊಲೀಸ್ ವ್ಯಾನ್ ನಲ್ಲಿ ಹೇಳಿದರೇ ಸಾಕ್ಷಿ ಬೇಕಲ್ವಾ..? ಎಂದು ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣ  ಯಾಕೆ ವಿಡಿಯೋ ಮಾಡಿಕೊಂಡರು. ವಿಡಿಯೋ ಮೊಬೈಲ್ ನಲ್ಲಿದ್ದಾಗ ಚಾಲಕನ ಕೈಗೆ ಹೇಗೆ ಹೋಯ್ತು..? ಯಾಕೆ ವಿಡಿಯೋ  ವೈರಲ್ ಮಾಡಿದ್ದರೆಂದು ಉತ್ತರ ನೀಡಲಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಪ್ರಜ್ವಲ್ ದೇಶದೊಳಗೆ ಇದ್ದರೇ ಹಿಡಿಯಬಹುದಿತ್ತು.  ವಿದೇಶದಲ್ಲಿ ಇದ್ದಾಗ ಕೇಂದ್ರದ ಸಹಕಾರ ಬೇಕಾಗುತ್ತದೆ ಎಂದರು.

Key words:  Priyank Kharge, Devaraj Gowda, 100 crore