6 ದಿನಗಳ ಕಾಲ ಪ್ರಜ್ವಲ್ ರೇವಣ್ಣರನ್ನ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ.

ಬೆಂಗಳೂರು,ಮೇ,31,2024 (www.justkannada.in): ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಂಸದ ಪ್ರಜ್ವಲ್ ರೇವಣ್ಣರನ್ನ ಜೂನ್ 6ರವರೆಗೆ ಎಸ್ ಐಟಿ ಕಸ್ಟಡಿಗೆ ನೀಡಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ವಿದೇಶದಿಂದ ನಿನ್ನೆ ತಡರಾತ್ರಿ ಆಗಮಿಸಿದ್ದ ಪ್ರಜ್ವಲ್ ರೇವಣ್ಣರನ್ನ ಬಂಧಿಸಿದ್ದ ಎಸ್ ಐಟಿ ಅಧಿಕಾರಿಗಳು ಇಂದು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು. ಪ್ರಜ್ವಲ್ ರೇವಣ್ಣ  ಪರ ವಕೀಲ ಅರುಣ್ ವಾದ ಮಂಡಿಸಿದರು. ಕೇಸ್ ನಲ್ಲಿ ಕಸ್ಟಡಿ ಪಡೆಯುವಂತಿಲ್ಲ . ವಿಡಿಯೋದಲ್ಲಿರುವ ಮುಖ ಆಧರಿಸಿ ತನಿಖೆ ನಡೆಸಿದ್ದಾರೆ. ಅತ್ಯಾಚಾರ ಮಾಡಿದ್ದಾರೆಂದು ಸಂತ್ರಸ್ತೆ ಮೊದಲು ದೂರು ನೀಡಿಲ್ಲ ನಾಲ್ಕು ವರ್ಷದ ಹಳೆಯ ಪ್ರಕರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಏ 28ರಿಂದ ಮೇ 2ರವರೆಗೆ ಅತ್ಯಾಚಾರದ ಬಗ್ಗೆ ಉಲ್ಲೇಖಿಸಿಲ್ಲ . ಲೈಂಗಿಕ ದೌರ್ಜನ್ಯದ ಕೇಸ್ ಅನ್ನು ಅತ್ಯಾಚಾರ ಕೇಸ್ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ 1 ದಿನ ಕಸ್ಟಡಿ ಸಾಕು ಎಂದರು.

ಇನ್ನು ಎಸ್ ಐಟಿ ಪರ ವಾದ ಮಂಡಿಸಿದ  ಎಸ್ ಪಿಪಿ ಅಶೋಕ್ ನಾಯ್ಕ್ ಪ್ರಜ್ವಲ್ ರೇವಣ್ಣರನ್ನ 15 ದಿನಗಳ ಕಾಲ ಎಸ್ ಐಟಿ ವಶಕ್ಕೆ ನೀಡುವಂತೆ ವಾದಿಸಿದರು. ವಾದ ಪ್ರತಿವಾದ ಆಲಸಿದ ಕೋರ್ಟ್ ಆದೇಶವನ್ನ ಕಾಯ್ದಿರಿಸಿತ್ತು.

ಇದೀಗ ಆದೇಶ ಪ್ರಕಟಿಸಿದ್ದು ಜೂನ್ 6ರವರೆಗೆ ಅಂದರೆ 6 ದಿನಗಳ ಕಾಲ ಪ್ರಜ್ವಲ್ ರೇವಣ್ಣರನ್ನ ಎಸ್ ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

Key words: SIT, custody, Prajwal Revanna, 6 days