ಜಯನಗರ ನ್ಯಾಷನಲ್ ಕಾಲೇಜಿಗೆ ನ್ಯಾಕ್(NAAC) ನಿಂದ  ‘A’ ಗ್ರೇಡ್.

ಬೆಂಗಳೂರು,ಜೂನ್,1,2024 (www.justkannada.in):   ಜಯನಗರ ನ್ಯಾಷನಲ್ ಕಾಲೇಜು ‘ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ’ (NAAC)ಯಿಂದ ‘A ಗ್ರೇಡ್’ ಪಡೆಯುವ ಮೂಲಕ ಉತ್ತಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೌಲ್ಯಮಾಪನ ಅಂಕಗಳಲ್ಲಿ 3.17 CGPA ಯನ್ನು  ಸಾಧಿಸಿ, ಕಳೆದ ಬಾರಿಯ A ಶ್ರೇಣಿಯ ಮಾನ್ಯತೆಯನ್ನು ಮೀರಿಸಿದೆ  ಎಂದು ಎನ್.ಇ. ಎಸ್. ಅಧ್ಯಕ್ಷರಾದ ಡಾ. ಹೆಚ್.ಎನ್.ಸುಬ್ರಮಣ್ಯ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಮಾನ್ಯತೆಯನ್ನು ನಿರ್ಧರಿಸಲು ಪಠ್ಯಕ್ರಮದ ಅಂಶಗಳು, ಬೋಧನೆ, ಕಲಿಕೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲಗಳು, ನಿರ್ವಹಣೆ, ಪ್ರಗತಿ ಸೇರಿದಂತೆ ಇತರೆ ಮಾನದಂಡಗಳ ಆಧಾರದಲ್ಲಿ  ನ್ಯಾಕ್ ಪೀರ್ ಟೀಮ್ ವಿಮರ್ಶಾ ತಂಡವು ಮೌಲ್ಯಮಾಪನ ಮಾಡಿದೆ.

ಕಾಲೇಜಿನ ಸಾಧನೆಗೆ , ಶೈಕ್ಷಣಿಕ ಉತ್ಕೃಷ್ಟತೆ, ಮೂಲಸೌಕರ್ಯ ಮತ್ತು ಉಪಕ್ರಮಗಳನ್ನು ಅಭಿವೃದ್ಧಿಪಡಿಸುವಲ್ಲಿ ಎನ್.ಇ. ಎಸ್. ಕಾರ್ಯದರ್ಶಿಗಳಾದ ವಿ.ವೆಂಕಟಾಶಿವಾ ರೆಡ್ಡಿ , ಚೇರ್ಮನ್ ಡಾ.ಪಿ.ಎಲ್.ವೆಂಕಟರಾಮ ರೆಡ್ಡಿ,  ಎಲ್ಲಾ ಆಡಳಿತ ಮಂಡಳಿ ಸದಸ್ಯರು,  ಪ್ರಾಂಶುಪಾಲರಾದ ಡಾ.ಬಿ.ಸುರೇಶ, ಪ್ರೊ.ಚೆಲುವಪ್ಪ ಸೇರಿದಂತೆ ಅಧ್ಯಾಪಕ ವರ್ಗ ಮತ್ತು ಸಿಬ್ಬಂದಿವರ್ಗದ ಪಾತ್ರವಿದೆ ಎಂದಿದ್ದಾರೆ.

Key words: Jayanagar, National College, A grade, NAAC