ಮೈಸೂರು,ಸೆ,18,2019(www.justkannada.in): ಕೆ. ಎಸ್.ಈಶ್ವರಪ್ಪ ತಲೆ ತಗ್ಗಿಸುವಂತ ಕೆಲಸವನ್ನ ಮಾಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ದಡ್ಡವಡ್ಡ ಎಂದು ಕರೆದಿರುವುದು ಜಾತಿ ನಿಂದನೆ. ಹೀಗಾಗಿ ಕೂಡಲೇ ಕೆ.ಎಸ್ ಈಶ್ವರಪ್ಪ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಮಾಜಿ ಸಂಸದ ಆರ್,ದೃವನಾರಾಯಣ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ಆರ್.ದೃವನಾರಾಯಣ್ , ಜನಪ್ರತಿನಿಧಿಗೆ ಎರಡು ಕಣ್ಣಿದ್ರೆ ನೋಡೋರ ಕಣ್ಣು ಸಾವಿರ ಇರುತ್ತೆ. ಸಚಿವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ಆದರೆ ಕೆಎಸ್.ಈಶ್ವರಪ್ಪ ತಲೆ ತಗ್ಗಿಸುವಂತ ಕೆಲಸವನ್ನ ಮಾಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ದಡ್ಡವಡ್ಡ ಎಂದು ಕರೆದಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೆ.ಎಸ್ ಈಶ್ವರಪ್ಪ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಜತೆಗೆ ಮುಸಲ್ಮಾನರ ಮತ ಪಡೆದ ಶಾಸಕರು ಹಿಜಿಡಾಗಳು ಎಂದಿರುವುದು ತಪ್ಪು. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡಲೇ ಈಶ್ವರಪ್ಪಅವರನ್ನು ಸಂಪುಟದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಕೋಲಾರದ ಹಟ್ಟಿಯಲ್ಲಿ ಅವಮಾನ ಆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಧೃವನಾರಾಯಣ್, ಅವರನ್ನು ರಸ್ತೆಯಲ್ಲಿ ಹೋಗದಂತೆ ತಡೆದಿರುವುದು ತಪ್ಪು. ಹಿಂದೂಪರ ಸಂಘಟನೆಗಳು ಈ ಸಂಧರ್ಭದಲ್ಲಿ ಮೌನ ವಹಿಸಿರೋದು ಸರಿಯಲ್ಲ. ಅವರು ಯಾಕೆ ಇಂತಹ ಅನಿಷ್ಟ ಪದ್ದತಿ ಹೋಗಲಾಡಿಸಲು ಪ್ರಯತ್ನ ಮಾಡಬಾರದು. ಮೌನವಹಿಸಿರುವ ಅರ್ಥ ಈ ರೀತಿ ವ್ಯವಸ್ಥೆ ಬೇಕು ಎನ್ನುವ ಸಂದೇಶ ಕೊಡುತ್ತಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಉತ್ತರ ಪ್ರದೇಶದಲ್ಲಿ ಜನಪ್ರತಿನಿಧಿಗಳೇ ಅಟ್ರಾಸಿಟಿ ಮಾಡಿದ್ದಾರೆ. ಈ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ದಲಿತರ ಮೇಲಿನ ದೌರ್ಜನ್ಯ ಜಾಸ್ತಿ ಆಗ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಅಮಿತ್ ಶಾ ದೇಶದಲ್ಲಿ ಬಹು ಪಕ್ಷ ವ್ಯವಸ್ಥೆಯನ್ನು ತೆಗೆದು ಹಾಕಲು ಹೋಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಕೊಡಲಿಪೆಟ್ಟು ಕೊಡಲು ನಿಂತಿದ್ದಾರೆ. ನಾವು ಹಿಂದಿ ಬಲವಂತ ಹೇರಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮಾನ್ಯತೆ ಇರಬೇಕು ಎಂದು ದೃವ ನಾರಾಯಣ್ ತಿಳಿಸಿದರು.
ಅಸ್ಪೃಶ್ಯತೆ ಜಾಸ್ತಿಯಾದಾಗ ಜಾತಿ ಬಿಟ್ಟಿ ಹೋಗಲು ಮುಂದಾಗ್ತಾರೆ. ಆಗ ಹಿಂದೂಪರ ಸಂಘಟನೆಗಳು ಬಲವಂತದ ಮತಾಂತರ ಅಂತ ಬರುತ್ತಾರೆ. ಮಂಗಳೂರಿಲ್ಲಿ ಬಿಜೆಪಿ ನಾಯಕರು ವ್ಯವಸ್ಥಿತವಾಗಿ ಹಿಂದೂತ್ವ ಜಾರಿ ಮಾಡಿದ್ದಾರೆ. ಹಿಂದೂ ಆಕಸ್ಮಿಕವಾಗಿ ತೀರಿಕೊಂಡ್ರೆ ಅದಕ್ಕೆ ಮುಸಲ್ಮಾನನೇ ಕಾರಣ ಎಂಬ ಬಣ್ಣಕಟ್ಟುತ್ತಾರೆ. ಅದೇ ಮಾದರಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಇಲ್ಲೂ ಮಾಡುತ್ತೇವೆ ಅಂದಿದ್ರು. ನಾನು ಪೋನ್ ಮಾಡಿ ಈ ಭಾಗದಲ್ಲಿ ಬೆಂಕಿ ಹಚ್ಚುವ ಕೆಲಸ ಬೇಡ ಎಂದಿದ್ದೇನೆ. ಹಿಂದೂ ಸಂಘಟನೆಗಳು ಅಸ್ಪೃಶ್ಯತೆ ಬಗ್ಗೆ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
Key words: KS Eshwarappa- publicly- apologize-Former MP- Dhruvanarayan –mysore