ತುಮಕೂರಿನಲ್ಲಿ ಬಿಜೆಪಿಗಿಂತಲೂ ಜೆಡಿಎಸ್ ಹೆಚ್ಚು ಕೆಲಸ : ಅವರಿಗೆ  ನಾನು ಯಾವತ್ತೂ ಋಣಿ-ವಿ.ಸೋಮಣ್ಣ.

ಮೈಸೂರು,ಜೂನ್,5,2024 (www.justkannada.in): ತುಮಕೂರು ಕ್ಷೇತ್ರದಲ್ಲಿ ಬಿಜೆಪಿಗಿಂತಲೂ ಜೆಡಿಎಸ್ ನವರು ಹೆಚ್ಚಿನದಾಗಿ ಕೆಲಸ ಮಾಡಿದರು. ದೇವೇಗೌಡರು, ಕುಮಾರಸ್ವಾಮಿ ನಾಲ್ಕೈದು ಭಾರಿ ಬಂದು ನನಗೆ ದೊಡ್ಡ ಶಕ್ತಿ ನೀಡಿದರು. ಅವರಿಗೆ ನಾನು ಯಾವತ್ತು ಋಣಿ ಎಂದು ತುಮಕೂರು ಕ್ಷೇತ್ರದ ನೂತನ ಸಂಸದ ವಿ.ಸೋಮಣ್ಣ ಹೇಳಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ,  ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಒಂದೇ ನ್ಯಾಣದ ಎರೆಡು ಮುಖದ ರೀತಿ ಕೆಲಸ ಮಾಡಿದರು . 28 ಕ್ಷೇತ್ರದಲ್ಲೂ ಆ ಸಮನ್ವಯತೆ ಇತ್ತು. ತುಮಕೂರು ಕ್ಷೇತ್ರದಲ್ಲಿ ಬಿಜೆಪಿಗಿಂತಲೂ ಜೆಡಿಎಸ್ ನವರು ಹೆಚ್ಚಿನದಾಗಿ ಕೆಲಸ ಮಾಡಿದ್ರು. ದೇವೇಗೌಡರು, ಕುಮಾರಸ್ವಾಮಿ ನಾಲ್ಕೈದು ಭಾರಿ ಬಂದು ನನಗೆ ದೊಡ್ಡ ಶಕ್ತಿ ನೀಡಿದರು. ಅವರಿಗೆ ನಾನು ಯಾವತ್ತು ಖುಣಿ. ಜೆಡಿಎಸ್ ಮತ್ತು ಬಿಜೆಪಿಯ ಈ ಸಮನ್ವಯತೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲೂ ಇದೇ ರೀತಿ ಮುಂದುವರೆಯುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದರು.

ಹನ್ನೊಂದು ತಿಂಗಳು ಒಂದು ರೀತಿ ವನವಾಸದಲ್ಲಿದೆ. ಸದಾ ಕೆಲಸ ಮಾಡುವವನಿಗೆ ಕೆಲಸವೇ ಇಲ್ಲದಂತಾಗಿತ್ತು. ಈಗ ಅದು ಮುಕ್ತಾಯವಾಗಿದೆ. ತುಮಕೂರಿನ ಜನ ನಾನು ಹೊರಗಿನವನು ಎಂದು ಒಂದು ಕ್ಷಣವೂ ಅಂದುಕೊಳ್ಳಲಿಲ್ಲ. ಯಾರೋ ನಾಲ್ಕು ಜನ ನಾಯಕರು ಮಾತನಾಡಿದರು ತಲೆ ಕೆಡಿಸಿಕೊಳ್ಳಲಿಲ್ಲ. ಎರಡು ಲಕ್ಷದ ಲೀಡ್ ನೀರಿಕ್ಷೆ ಮಾಡಿದ್ದೆ. ಆದರೆ 20 ಸಾವಿರ ಕಡಿಮೆಯಾಯಿತು ಅಷ್ಟೇ ಎಂದು ವಿ.ಸೋಮಣ್ಣ ತಿಳಿಸಿದರು.

ಸಚಿವ ಸ್ಥಾನ ಹೈಕಮಾಂಡ್ ಗೆ ಬಿಟ್ಟಿದ್ದು..

ಅಮಿತ್ ಶಾ ಈ ಬಾರಿ ಏನಾದರೂ ಸೋಮಣ್ಣಗೆ ದೊಡ್ಡ ಗಿಫ್ಟ್ ಕಾದಿದೆ ಎಂದು ಹೇಳಿದ್ದರೆ ದೊಡ್ಡ ಸಮಸ್ಯೆಯಾಗುತ್ತಿತ್ತೇನೋ ಬಿಡಿ. ವಿಧಾನಸಭಾ ಚುನಾವಣಾ ವೇಳೆ ಅಮಿತ್ ಶಾ ದೊಡ್ಡ ಗಿಫ್ಟ್ ಬಗ್ಗೆ ಮಾತನಾಡಿದ್ದಕ್ಕೆ ಒಂದಿಷ್ಟು ಸಮಸ್ಯೆಯಾಗಿತ್ತು. ಈ ಬಾರಿ ಆ ಮಾತು ಆಡಲಿಲ್ಲ. ಸಚಿವ ಸ್ಥಾನ ತೀರ್ಮಾನ ಎಲ್ಲವೂ ಹೈ ಕಮಾಂಡ್ ಗೆ ಬಿಟ್ಟಿದ್ದು. ಇಂದಿನ ಪರಿಸ್ಥಿತಿಯನ್ನ ನಾವು ಅರ್ಥ ಮಾಡಿಕೊಂಡಿದ್ದೇವೆ‌ ಇದರಲ್ಲೂ ನನಗೆ ಒಂದು ವೇಳೆ ಅವಕಾಶ ಸಿಕ್ಕದರೆ ಇನ್ನೂ ಹೆಚ್ಚಿನ ಕೆಲಸ ಆಗುತ್ತದೆ ಅಷ್ಟೇ. ಅವಕಾಶ ಸಿಗುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ನಾನು ನಾಳೆ ದೆಹಲಿಗೆ ಹೋಗುತ್ತೇನೆ ಎಂದು ಸಂಸದ ವಿ.ಸೋಮಣ್ಣ ಹೇಳಿದರು.

Key words: JDS, BJP, Tumkur, V.Somanna