ಕೋಲಾರ, ಚಿಕ್ಕಬಳ್ಳಾಪುರದಲ್ಲಿ ‘ಕೈ’ ಸೋಲಿಗೆ ಕಾರಣ ಕೊಟ್ಟ ಸಚಿವ ಮುನಿಯಪ್ಪ.

ಬೆಂಗಳೂರು,ಜೂನ್,5,2024 (www.justkannada.in):  ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸೋಲಾಗಿದ್ದು ಇದಕ್ಕೆ ಕಾರಣವೇನೆಂಬುದನ್ನ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಸ್ಥಳೀಯ ನಾಯಕರು ನಾವು ಒಂದೇ ಎನ್ನುವ ಸಂದೇಶ ಕೊಟ್ಟಿಲ್ಲ ಒಟ್ಟಿಗೆ ಇದ್ದೇವೆ ಫೈಟ್ ಮಾಡುತ್ತೇವೆ ಎಂದು ಸಂದೇಶ ಕೊಟ್ಟಿಲ್ಲ ಬಿಜೆಪಿ-ಜೆಡಿಎಸ್ ವಿರುದ್ದ ಫೈಟ್ ಮಾಡುತ್ತೇವೆ ಅನ್ನೋದರಲ್ಲಿ ವಿಫಲರಾದರು.  ಇದನ್ನ ಒಪ್ಪಿಕೊಳ್ಳಲೇಬೇಕು. ಇದನ್ನ ಹೈಕಮಾಂಡ್  ಗಮನಕ್ಕೂ ತಂದಿದ್ದೆ.  ಸಿಎಂ ಡಿಸಿಎಂ ಬಳಿಯೂ ಗಮನ ಹರಿಸಿ ಎಂದಿದ್ದೆ. ಆದರೇ  ಈ ರೀತಿಯ ಫಲಿತಾಂಶ ಬಂದಿದೆ ಎಂಬ ನೋವಿದೆ. ಕಾಂಗ್ರೆಸ್ ಕಟ್ಟಿ ಕಾಪಾಡಿದ ಜನರಿಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮಗೆ ರಾಜ್ಯದಲ್ಲಿ ಕಳೆದ ಬಾರಿಗಿಂತ  ಹೆಚ್ಚು ಸ್ಥಾನ ಬಂದಿದೆ. ಗ್ಯಾರಂಟಿ ಕೆಲಸ ಮಾಡಿದೆ ಎರಡೂ ಪಕ್ಷ ಒಂದಾದಾಗ 5 ರಿಂದ 10ರಷ್ಟು ಮತಗಳು  ಕಡಿಮೆಯಾಗುತ್ತೆ. ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ನಮಗೆ ಫೈಟ್ ಕೊಡುತ್ತಿತ್ತು. ಅಸೆಂಬ್ಲಿಯಲ್ಲಿ ಒಂದು ಬಾರಿ ನಾವು ಇನ್ನೊಂದು ಬಾರಿ ಅವರು ಗೆಲ್ಲುತ್ತಿದ್ದವು. ಮುಂದೆ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್  ಚುನಾವಣೆ ಬರುತ್ತೆ. ಅವುಗಳನ್ನ ಗೆಲ್ಲಬೇಕು. ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಚಿವ ಮುನಿಯಪ್ಪ ಕಿವಿಮಾತು ಹೇಳಿದರು.

Key words: KH Muniyappa, congress, Chikkaballapur, Kolar