ನವದೆಹಲಿ,ಸೆ,18,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನ ರೋಸ್ ಅವೆನ್ಯೂ ಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ.
ಇಡಿ ಪರ ವಕೀಲ ಹಾಗೂ ಎಎಸ್ ಜಿ ಕೆ.ಎಂ ನಟರಾಜ್ ಅವರು ಕೋರ್ಟ್ ಆಗಮಿಸದ ಹಿನ್ನೆಲೆ, ರೋಸ್ ಅವೆನ್ಯೂ ಕೋರ್ಟ್ ಜಡ್ಜ್ ಅಜಯ್ ಕುಮಾರ್ ಅವರು ಜಾಮೀನು ಅರ್ಜಿ ವಿಚಾರಣೆಯಬ್ಬ ನಾಳೆಗೆ ಮುಂದೂಡಿಕೆ ಮಾಡಿದರು. ಜಾಮೀನು ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಡಿ.ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದವರು. ಹೀಗಾಗಿ ಅವರು ಸಾಕಷ್ಟು ಜಮೀನು ಹೊಂದಿರುತ್ತಾರೆ. ಈ ಸಮುದಾಯ ಕೃಷಿ ನಂಬಿಕೊಂಡು ಬದುಕುತ್ತದೆ. ಡಿ.ಕೆ ಶಿವಕುಮಾರ್ ಅವರಿಗೆ ಆಸ್ತಿ ವಂಶಪಾರಂಪರ್ಯದಿಂದ ಬಂದಿದೆ. ಇತ್ತೀಚೆಗೆ ಜಮೀನಿನ ಮೌಲ್ಯ ಹೆಚ್ಚಳವಾಗಿದ್ದು ಅದನ್ನೇ ಅಕ್ರಮ ಎನ್ನಲು ಸಾಧ್ಯವಾ..? ಮಗಳಿಗೆ ಹಣ ನೀಡಿದ್ರೆ ಹೇಗೆ ಅಕ್ರಮವಾಗುತ್ತದೆ ಎಂದು ವಾದ ಮಂಡಿಸಿದರು.
ಆದರೆ ಇಡಿ ಪರ ವಕೀಲರು ಆಗಮಿಸದ ಹಿನ್ನೆಲೆ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಯಿತು. ಇಂದು ಸಂಜೆಗೆ ಡಿ.ಕೆ ಶಿವಕುಮಾರ್ ಅವರ ಆರೋಗ್ಯದ ಬಗ್ಗೆ ವೈದ್ಯರು ವರದಿ ನೀಡಲಿದ್ದು ಆನಂತರ ಡಿಕೆ ಶಿವಕುಮಾರ್ ಗೆ ಜೈಲುವಾಸದ ಬಗ್ಗೆ ನಿರ್ಧಾರವಾಗುತ್ತದೆ.
Key words: Former Minister- DK Sivakumar- bail application- postponed – tomorrow