ಬೆಂಗಳೂರು,ಜೂನ್,17,2024 (www.justkannada.in): ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ ದರ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಬೇರೆ ರಾಜ್ಯಕ್ಕೆ ಹೋಲಿಸಿದರೇ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ. ರಾಜ್ಯದ ಅಭಿವೃದ್ದಿ ಮಾಡಲು ತೆರಿಗೆ ಬೇಕಲ್ವಾ..? ತೈಲಬೆಲೆ ಲಿಕ್ಕರ್ ಮೂಲಕ ಆದಾಯ ಸಂಗ್ರಹಿಸಬೇಕು. ಹೀಗಾಗಿ ಬೆಲೆ ಹೆಚ್ಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬೆಲೆ ಏರಿಕೆ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಪ್ರತಿಭಟನೆ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೋದಿ ಪ್ರಧಾನಿಯಾದಾಗ ತೈಲಬೆಲೆ ಇಳಿಕೆ ಮಾಡುತ್ತೇವೆ ಎಂದಿದ್ದರು ಆದರೆ ಮೋದಿ ತೈಲಬೆಲೆ ಇಳಿಕೆ ಮಾಡಲಿಲ್ಲ. ಕ್ರೂಡ್ ಆಯಿಲ್ ಬೆಲೆ ಕಡಿಮೆ ತೈಲಬೆಲೆ ಹೆಚ್ಚಾಗಿದೆ. ಗ್ಯಾಸ್ ದರ ಏರಿಕೆಯಾಗಿದೆ, ತೈಲಬೆಲೆ ಏರಿಕೆಯಾಗಿದೆ. ಬಿಜೆಪಿಯವರು ಈಗ ಪ್ರತಿಟನೆ ಮಾಡುತಿದ್ದಾರೆ. ಮೊದು ಕೇಂದ್ರದ ವಿರುದ್ದ ಮಾಡಲಿ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಜಿಎಸ್ ಟಿ ಜಾರಿ ಮಾಡಿದೆ. ರಾಜ್ಯ ಸರ್ಕಾರ ತೆರಿಗೆ ಹೆಚ್ಚಳ ಮಾಡೋದು ಕಡಿಮೆಯಾಯಿತು. ಜಿಎಸ್ ಟಿ, ಆದಾಯ ತೆರಿಗೆ, ಕಾರ್ಪೋರೇಟ್ ಟ್ಯಾಕ್ಸ್ ಎಲ್ಲವನ್ನು ಕೇಂದ್ರದವರು ಕಲೆಕ್ಟ್ ಮಾಡುತ್ತಾರೆ. ರಾಜ್ಯ ಸರ್ಕಾರ ಸೇಲ್ಸ್ ಟ್ಯಾಕ್ಸ್ ಹಾಕಬಹುದು. ಜಿಎಸ್ ಟಿ ಪಾಲನ್ನೂ ಕೂಡ ರಾಜ್ಯಕ್ಕೆ ಕಡಿಮೆ ಕೊಡ್ತಾರೆ. ಕೇಂದ್ರ ಸರ್ಕಾರ ತೆರಿಗೆ ಪಾಲು ಸರಿಯಾಗಿ ನೀಡುತ್ತಿಲ್ಲ. ಕೇಂದ್ರದಲ್ಲಿ ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆಯಾದಾಗ ಬಿಜೆಪಿ ಮಾತನಾಡಲಿಲ್ಲ. ನಾವು ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ನಡೆದುಕೊಂಡಿದ್ದೇವೆ.. ಅಶೋಕ್ ಗೆ ಪಾಪರ್ ಅನ್ನೋ ಅರ್ಥ ಗೊತ್ತಿದೆಯಾ ಸರ್ಕಾರಿ ನೌಕರರಿಗೆ ಸಂಬಳ ನೀಡೋದು ನಿಲ್ಲಿಸಿದ್ದೀವಾ..? ಎಂದು ವಾಗ್ದಾಳಿ ನಡೆಸಿದರು.
ಬರಪರಿಹಾರ ಪಡೆಯಲು ಕೇಂದ್ರ ಸರ್ಕಾರದ ವಿರುದ್ದ ಕೋರ್ಟ್ ಗೆ ಹೋಗಬೇಕಾಯಿತು. 3454 ಕೋಟಿ ರೂ ಪರಿಹಾರ ನೀಡಿದ್ರು. ನಾವು 18 ಸಾವಿರ ಕೋಟಿ ರೂ ಕೇಳಿದ್ದವು. ದಲಿತರು ಬಡವರ ವಿರೋಧಿ ಇರೋದು ಬಿಜೆಪಿಯವರು . ನಾವು ಗ್ಯಾರಂಟಿ ಕೊಟ್ಟಿದ್ದು ಬಡವರಿಗೆ . ಮಹಿಳೆಯರು ಫ್ರಿಯಾಗಿ ಬಸ್ ನಲ್ಲಿ ಓಡಾಡುತ್ತಿದ್ದಾರೆ. ಮಹಿಳೆಯರಿಗೆ 2 ಸಾವಿರ ರೂ ಬರುತ್ತೆ. ಇದರಿಂದ ಸಹಾಯವಾಗುತ್ತದೆ. ವಿದ್ಯುತ್ ಫ್ರಿ ನೀಡಿದ್ದೇವೆ. ಇದು ಬಡವರಿಗಾಗಿ ಅನುಕೂಲವಾಗುತ್ತದೆ. ಆದರೆ ಇದನ್ನ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.
Key words: CM Siddaramaiah, hike, petrol, diesel, prices