ಮುಡಾ ಅಕ್ರಮ ವಿಚಾರ:  ಅದು ನನ್ನ ಪತ್ನಿಯ ಅಣ್ಣ ದಾನವಾಗಿ ಕೊಟ್ಟ ಜಮೀನು- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು,ಜುಲೈ,2,2024 (www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಸೈಟುಗಳ ಹಂಚಿಕೆಯಲ್ಲಿ ಅಕ್ರಮ ವಿಚಾರ, ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಲ್ಲೂ ಅಕ್ರಮ ನಿವೇಶನ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ಮುಡಾ ಕಚೇರಿಯ ಅಕ್ರಮದಲ್ಲಿ ಸಿಎಂ ಪತ್ನಿ ಪಾರ್ವತಮ್ಮ ಅವರ ಹೆಸರು ಕೇಳಿಬಂದಿರುವ ಹಿನ್ನಲೆ, ಈ ಕುರಿತು ಮಾತನಾಡಿರುವ  ಸಿಎಂ ಸಿದ್ದರಾಮಯ್ಯ, ಇದು ಬಿಜೆಪಿಯವರ ಕಾಲದಲ್ಲಿ ಆಗಿದ್ದು,  ನನ್ನ ಹೆಂಡತಿ ಜಮೀನು ಅದು, ಮೈಸೂರಿನ ಕೆಸರೆ ಹತ್ರ ರಿಂಗ್ ರೋಡ್ ಬಳಿ 3.16 ಗುಂಟೆ ಇದೆ. ಅದು ನನ್ನ ಹೆಂಡತಿ ಅಣ್ಣ ಮಲ್ಲಿಕಾರ್ಜುನ ದಾನವಾಗಿ ಕೊಟ್ಟ ಜಮೀನು. ಈ ಜಮೀನನ್ನು ಬಾಮೈದ ತೆಗೆದುಕೊಂಡು ಅರಿಶಿನ-ಕುಂಕಮ ರೀತಿಯಲ್ಲಿ ಉಡುಗೊರೆಯಾಗಿ ನನ್ನ ಪತ್ನಿಗೆ ಕೊಟ್ಟಿದ್ದಾನೆ. ಅದನ್ನ ಮುಡಾದವರು ಏಕಾಏಕಿ ಸೈಟ್ ಮಾಡಿ ಹಂಚಿದರು. 50: 50 ರ ಅನುಪಾತದಡಿ ಭೂಮಿ ಕಳೆದುಕೊಂಡವರಿಗೆ ಬೇರೆ ಜಾಗದಲ್ಲಿ ಪರಿಹಾರ ರೂಪದಲ್ಲಿ ಸೈಟು ಕೊಟ್ಟಿದ್ದಾರೆ. ಅಲ್ಲೇನು ತಪ್ಪಾಗಿದೆ ಎಂದು ಪ್ರಶ್ನಿನಿಸಿದರು.

ಹಾಲು ಉದ್ಪಾದನೆ: ಕೆಎಂಎಫ್ ನ ಇತಿಹಾಸದಲ್ಲಿ ಒಂದು ಮೈಲುಗಲ್ಲು.

ಒಂದು ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯನ್ನ ಕೆಎಂಎಫ್ ಮಾಡಿದೆ. ಇದು ಕೆಎಂಎಫ್ ನ ಇತಿಹಾಸದಲ್ಲಿ ಒಂದು ಮೈಲುಗಲ್ಲು. ನಾನು ಕೂಡ ಪಶುಸಂಗೋಪನಾ ಸಚಿವನಾಗಿದ್ದಾಗ ಡೈರಿಗಳನ್ನ ಸಹಕಾರಿ ಕ್ಷೇತ್ರಕ್ಕೆ ಸೇರಿಸಿದ್ದು ನಾನು. ಇಂದು ರಾಜ್ಯದಲ್ಲಿ 16 ಸಾವಿರಕ್ಕೂ ಹೆಚ್ಚು ಹಾಲು ಒಕ್ಕೂಟಗಳಿವೆ. 15 ಮಿಲ್ಕ್ ಯೂನಿಯನ್ ಗಳಿವೆ. ದಿನಕ್ಕೆ ಒಂದು ಕೋಟಿಗೆ ಹೆಚ್ಚು ಲೀಟರ್ ಹಾಲನ್ನ ಸಂಗ್ರಹ ಮಾಡುತ್ತಿದ್ದೇವೆ. ಹಾಲಿನ‌ ದರ ಪರಿಷ್ಕರಣೆಯಿಂದ ಹಾಲು ಉತ್ಪಾದಕರಿಗೆ ಏನೂ ತೊಂದರೆ ಆಗಿಲ್ಲ. ಹಾಲಿನ‌ ದರ ಏರಿಕೆ ಮಾಡಿದ್ರೆ ಅದು ಗ್ರಾಹಕರಿಗೆ ಹೊರೆಯಾಗುತ್ತದೆ. ನಾವು ಹೆಚ್ಚುವರಿಯಾಗಿ 50 ಎಂಎಲ್ ಕೊಟ್ಟು ಕ್ವಾಂಟಿಟಿ ಆಧಾರದ ಮೇಲೆ 2 ರೂ ಜಾಸ್ತಿ ಮಾಡಿದ್ದೇವೆ. ಸುಖ ಸುಮ್ಮನೆ ಈ ವಿರೋಧ ಪಕ್ಷದವರು ಟೀಕೆ ಮಾಡ್ತಾರೆ ಅಷ್ಟೇ ನಾವು ಯಾವುದೇ ಹಾಲಿನ ದರ ಏರಿಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

1 ಕೋಟಿ ಹಾಲಿಗೆ 5 ರೂ‌ ನಂತರ 5 ಕೋಟಿ ಸಹಾಯ ಧನ ನೀಡುತ್ತೇವೆ. 1 ತಿಂಗಳಿಗೆ 150 ಕೋಟಿ ಆಗುತ್ತದೆ. ಒಂದು ವರ್ಷಕ್ಕೆ 18 ಸಾವಿರ ಕೋಟಿ ಸಹಾಯ ಧನ ಕೊಡಲಾಗುತ್ತದೆ. 2 ರೂ ಇದ್ದ ಸಹಾಯ ಧನವನ್ನು 5 ರೂಗೆ ಏರಿಸಿದ್ದು ನಾನು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Muda, illegal, CM, Siddaramaiah, wife,