MYSORE RING ROAD: ಬಾವಿ ಪತ್ತೆ ;  ವಾಹನಗಳ ಸಂಚಾರಕ್ಕೆ ನಿರ್ಬಂಧ..!

MYSORE RING ROAD: WELL, DETECTED; Restrictions on the movement of vehicles.

 

ಮೈಸೂರು, ಜು.20,2024: (www.justkannada.in news) ಇಲ್ಲಿನ ದಟ್ಟಗಳ್ಳಿ ರಿಂಗ್‌ ರಸ್ತೆಯಲ್ಲಿ ಅಚಾನಕ್‌ ೨೦ ಅಡಿ ಆಳದ ಬಾವಿ (ಗುಂಡಿ) ಪತ್ತೆಯಾಗಿದೆ.

ದಟ್ಟಗಳ್ಳಿ ರಿಂಗ್‌ ರಸ್ತೆಯ ಮೈಸೂರು ವಿಶ್ವವವಿದ್ಯಾನಿಲಯ ಬಡಾವಣೆ ಬಳಿಕ ಸಿಗುವ ಮಾರಮ್ಮನ ದೇವಾಲಯದ ಕೂಗಳತೆ ದೂರದಲ್ಲಿ ಈ ಬಾವಿ ಪತ್ತೆಯಾಗಿದೆ. ಕಳೆದ ಕೆಲ ದಿನಗಳಿಂದ ಮೈಸೂರು ನಗರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣಕ್ಕೋ ಏನೋ ರಿಂಗ್‌ ರಸ್ತೆಯಲ್ಲಿ ಈ ಬೃಹತ್ ಹೊಂಡ ಪತ್ತೆಯಾಗಿದೆ.

ಶುಕ್ರವಾರ ತಡ ರಾತ್ರಿ ಈ ಬಗ್ಗೆ ಮಾಹಿತಿ ಪಡೆದ ಸಂಬಂಧಿಸಿದ ಅಧಿಕಾರಿಗಳು ಪೊಲೀಸರ ನೆರವಿನಿಂದ ರಸ್ತೆಯಲ್ಲಿ ಬ್ಯಾರಿಕೇಡ್‌ ಅಳವಡಿಸಿ ಸಂಚಾರ ನಿರ್ಬಂಧಿಸಿದ್ದಾರೆ. ಆ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಮುಡಾ ನಿರ್ಮಿಸಿದ್ದ ರಸ್ತೆ:

ಹದಿನೈದು ವರ್ಷಗಳ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಎಡಿಬಿ ಸಹಾಯದಿಂದ ಈ ವರ್ತುಲ ರಸ್ತೆಯನ್ನು ನಿರ್ಮಾಣ ಮಾಡಿತ್ತು. ಅಂದಿನ ಮುಡಾ ಅಧ್ಯಕ್ಷರಾಗಿದ್ದ ಸಂದೇಶ್‌ ನಾಗರಾಜ್‌ ಅವರ ಅವಧಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿತ್ತು. ನೂರಾರು ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.

ಇತ್ತೀಚೆಗೆ ವರ್ಷದ ಹಿಂದೆಯಷ್ಟೆ ರಿಂಗ್‌ ರಸ್ತೆ ಹಾಗೂ ಸರ್ವಿಸ್‌ ರಸ್ತೆಗೆ ಒಪ್ಪಂದ್ದದಂತೆ ಬಾಕಿ ಉಳಿದಿದ್ದ  ಡಾಂಬರು ಹಾಕಲಾಗಿತ್ತು.

KEY WORDS: MYSORE RING ROAD, WELL, DETECTED, Restrictions, on the movement of, vehicles.