ಚಾಮರಾಜನಗರ, ಜು.20,2024: (www.justkannada.in news) ಕಪಿಲಾ ನದಿ ಪ್ರವಾಹದಿಂದ ಗುಂಡ್ಲುಪೇಟೆ ಭಾಗದ ಬಹು ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಗೂ ಬಿತ್ತು ಬ್ರೇಕ್.
ನೀರು ಪೂರೈಕೆ ಮಾಡುತ್ತಿದ್ದ ಘಟಕ ಮುಳುಗಡೆ ಹಿನ್ನಲೆ ಕಾರ್ಯ ಸ್ಥಗಿತ. ದೇಬೂರು ಗ್ರಾಮದ ಬಳಿ ಇರುವ ನೀರು ಶುದ್ಧೀಕರಣ ಘಟಕ ಜಲಾವೃತ. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತ.
ಶುದ್ಧೀಕರಣ ಘಟಕ ಮುಳುಗಡೆ ಹಿನ್ನಲೆ ಇನ್ನೂ ಒಂದು ತಿಂಗಳ ಕಾಲ ನೀರು ಬಿಡಲ ಅಸಾಧ್ಯ. ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳಿಂದ ಸೂಚನೆ.
ದಿನಾಂಕ 18 ರಿಂದ ಸುಮಾರು 30- 45 ದಿನಗಳ ಕಾಲ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ. ಪರ್ಯಾಯವಾಗಿ ಬೋರ್‌ವೆಲ್‌ಗಳನ್ನು ಉಪಯೋಗಿಸಲು ಸೂಚನೆ. ಸಾರ್ವಜನಿಕರು ಸಹಕರಿಸಬೇಕಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ಕಾರ್ಯಪಾಲಕ ಇಂಜಿನಿಯರ್ ಮಧುಸೂದನ್ ಮನವಿ.
key words: The effect of, heavy rain, drinking water, supply to be suspended, for 30-45 days