ನವದೆಹಲಿ,ಜುಲೈ,20,2024 (www.justkannada.in): ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) 2024ರ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದೆ.
ಈ ಸಂಬಂಧ ಜುಲೈ 20 ಶನಿವಾರದೊಳಗೆ ನೀಟ್ –ಯುಜಿ ಪರೀಕ್ಷೆಯ ಫಲಿತಾಂಶವನ್ನ ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸದೆ, ನಗರವಾರು, ಕೇಂದ್ರವಾರು ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಸೂಚಿಸಿತ್ತು.
ಅಂತೆಯೇ ಇಂದು ನೀಟ್- ಯುಜಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ನೀಟ್ 2024 ಫಲಿತಾಂಶಗಳನ್ನು ಪರಿಶೀಲಿಸಲು exams.nta.ac.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಫಲಿತಾಂಶವನ್ನು ಪ್ರವೇಶಿಸಲು, ಅಭ್ಯರ್ಥಿಗಳು ತಮ್ಮ ಲಾಗಿನ್ ವಿವರಗಳಾದ ಹುಟ್ಟಿದ ದಿನಾಂಕ, ನೋಂದಣಿ ಸಂಖ್ಯೆ ಮತ್ತು ಇತರ ಕೇಳಿದ ವಿವರಗಳನ್ನು ಬಳಸಬೇಕಾಗುತ್ತದೆ.
Key words: NEET-UG, result, announce