ನವದೆಹಲಿ, ಜುಲೈ,22,2024 (www.justkannada.in): ಕೆಆರ್ ಎಸ್ ಜಲಾಶಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ರಿಂದಲೇ ಇಂದು ಡ್ಯಾಂಗಳು ತುಂಬಿ ತುಳುಕುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.
ಕೆಆರ್ ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗುತ್ತಿದ್ದು, ಜುಲೈ 27ಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೆಆರ್ ಎಸ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಗಂಗಾ ಆರತಿ ರೀತಿ ಕಾವೇರಿ ಆರತಿ ಮಾಡಿದರೇ ಒಳ್ಳೆಯದು. ಕಳೆದ ಐದಾರು ದಿನಗಳಿಂದ ತಮಿಳುನಾಡುಗೆ 5ರಿಂದ 6 ಟಿಎಂಸಿ ನೀರು ಹೋಗುತ್ತಿದೆ. ಜೂನ್, ಜುಲೈ ತಿಂಗಳಿನ ಪಾಲಿಗಿಂತ ಹೆಚ್ಚು ನೀರು ಹೋಗಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಗೂ ನಾನು ಹೇಳಿದ್ದು ಇಷ್ಟೇ. ತಮಿಳುನಾಡು ಸಿಎಂ ಕರ್ನಾಟಕದ ಬಗೆಗಿನ ನಡವಳಿಕೆ ತಿದ್ದುಕೊಳ್ಳಲಿ. ಕರ್ನಾಟಕ ತಮಿಳುನಾಡಿಗೆ ಯಾವತ್ತೂ ಸಮಸ್ಯೆ ಮಾಡಿಲ್ಲ. ನೀರು ಬಳಕೆ ಮಾಡುವ ದೃಷ್ಟಿಯಿಂದ ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಬೇಕು. ರಾಜ್ಯ ಸರ್ಕಾರ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Key words: dams, overflowing, DK Shivakumar, HDK